ಬೀದರ್: ಕೊಟ್ಟ ಹಣ ವಾಪಸ್ ಕೇಳಿದ್ದಕ್ಕೆ ಸ್ನೇಹಿತನಿಗೆ ಚಾಕು ಇರಿದ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ಪಟ್ಟಣದಲ್ಲಿ ನಿನ್ನೆ ಸಂಜೆ ನಡೆದಿದೆ. ಬಸವಕಲ್ಯಾಣ ತ್ರಿಪುರಾಂತ ನಿವಾಸಿ ಅಶೋಕ್ ಪಾಟೀಲ್ ಗಾಯಗೊಂಡ ವ್ಯಕ್ತಿಯಾಗಿದ್ದು, ದಯಾನಂದ ಶಿಂಧೆ ಚಾಕು ಇರಿದ ಆರೋಪಿಯಾಗಿದ್ದಾನೆ.
ಆರೋಪಿ ದಯಾನಂದ ಶಿಂಧೆಗೆ ಅಶೋಕ್ ಪಾಟೀಲ್ 10 ಸಾವಿರ ರೂ. ಸಾಲ ಕೊಟ್ಟಿದ್ದನು. 10 ಸಾವಿರ ರೂ. ಸಾಲದ ಹಣ ವಾಪಸ್ ಕೇಳಿದ್ದಕ್ಕೆ ನಿನ್ನೆ ಸಂಜೆ ಬಸವಕಲ್ಯಾಣ ಬಾರ್‌ವೊಂದರಲ್ಲಿ ಅಶೋಕ್ ಪಾಟೀಲ್ ಕುಳಿತಿದ್ದಾಗ ಬಾರ್ ಗೆ ನುಗ್ಗಿ ಚಾಕು ಇರಿದಿದ್ದಾನೆ. ತಕ್ಷಣ ಅಲ್ಲಿದ್ದವರು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಅಶೋಕ್ ಪಾಟೀಲ್ ಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇನ್ನೂ ಪಿಎಸ್ಐ ಅಂಬರೀಶ್ ವಾಗ್ಮೋಡೆ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಘಟನೆ ಸಂಬಂಧ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದರು. ಇಂದು ಬೆಳಿಗ್ಗೆ ಆರೋಪಿ ದಯಾನಂದ ಶಿಂಧೆಯನ್ನ ಬಂಧಿಸಿದ್ದಾರೆ.