ದೂದಪೀರಾಂರವರ ಉರುಸು ಏ.21ರಿಂದ

0
urusu
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಹಿಂದೂ-ಮುಸ್ಲಿಂ ಭಾವೈಕ್ಯತೆ ಮತ್ತು ಸರ್ವಧರ್ಮ ಸಮನ್ವಯತೆಗೆ ಸಾಕ್ಷಿಯಾದ ಲಕ್ಷ್ಮೇಶ್ವರದ ದೂದನಾನಾ ದರ್ಗಾದ ದೂದಪೀರಾಂರವರ 135ನೇ ಉರುಸು ಕಾರ್ಯಕ್ರಮ ಏ.21 ಮತ್ತು ಏ.22 ಎರಡು ದಿನಗಳ ಕಾಲ ನಡೆಯಲಿದೆ. ಈ ಬಾರಿ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ದೂದಪೀರಾಂ ದರ್ಗಾ ಕಮಿಟಿಯ ಅಧ್ಯಕ್ಷ ಸುಲೇಮಾನ ಕಣಕೆ ಮತ್ತು ಎಸ್.ಕೆ. ಹವಾಲ್ದಾರ ಮಾಹಿತಿ ನೀಡಿದರು.

Advertisement

urusu

ಅವರು ಮಂಗಳವಾರ ದರ್ಗಾ ಹಾಲ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಉರುಸು ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು. ನೂರಾರು ವರ್ಷಗಳಿಂದ ಹಿಂದೂ-ಮುಸ್ಲಿ ಮತ್ತು ಸರ್ವ ಧರ್ಮದ ಸಮಾಜ ಬಾಂಧವರು ಇಲ್ಲಿನ ದೂದನಾನಾರವರಿಗೆ ಶೃದ್ಧಾ-ಭಕ್ತಿಯಿಂದ ನಡೆದುಕೊಳ್ಳುತ್ತಿದ್ದಾರೆ.

ತನ್ಮೂಲಕ ಭಕ್ತಿ ಮತ್ತು ಜಾಗೃತ ಕೇಂದ್ರವಾಗಿ ಬೆಳೆದು ನಿಂತಿದೆ. ಇಂದು ದೇಶಾದ್ಯಂತ ಸಾವಿರಾರು ಭಕ್ತರು ಈ ಕ್ಷೇತ್ರಕ್ಕೆ ಆಗಮಿಸಿ ತಮ್ಮ ಕಷ್ಟ-ಕಾರ್ಪಣ್ಯಗಳಿಂದ ಮುಕ್ತಿ ಹೊಂದುತ್ತಿದ್ದಾರೆ. ನಾಡಿನ ಅನೇಕ ಭಕ್ತರ ಸಹಕಾರದಿಂದ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯ, ಅಗತ್ಯ ಸೌಲಭ್ಯಗಳನ್ನು ಮಾಡಲಾಗಿದೆ.

ಪ್ರತಿವರ್ಷದಂತೆ ಈ ವರ್ಷವೂ ದೂದಪೀರಾಂರವರ 135ನೇ ವರ್ಷದ ಉರುಸು ಕಾರ್ಯಕ್ರಮ ಆಚರಿಸಲು ನಿರ್ಧರಿಸಲಾಗಿದೆ. ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾಲೂಕಾಡಳಿತದ ನಿರ್ದೇಶನದಂತೆ ಖವ್ವಾಲಿ, ಧರ್ಮಜಾಗೃತಿ ಸಭೆ ಸೇರಿ ಹಲವಾರು ಕಾರ್ಯಕ್ರಮಗಳನ್ನು ಕೈಬಿಟ್ಟು ಧಾರ್ಮಿಕ ಸಂಪ್ರದಾಯಗಳನ್ನು ಪರಂಪರೆಯಂತೆ ಆಚರಿಸಲು ನಿರ್ಧರಿಸಲಾಗಿದೆ. ಈ ಕುರಿತಂತೆ ಜಿಲ್ಲಾಡಳಿತ, ತಾಲೂಕಾಡಳಿತ ಮತ್ತು ಪೊಲೀಸ್ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಚುನಾವಣೆ ಮಾರ್ಗಸೂಚಿಯಂತೆ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಅಂಜುಮನ್ ಕಮಿಟಿ ಅಧ್ಯಕ್ಷ ಎಂ.ಎಂ. ಗದಗ, ಉಪಾಧ್ಯಕ್ಷ ಎ.ಜಿ. ಸೂರಣಗಿ, ದಾದಾಪೀರ ಮುಚ್ಚಾಲೆ, ದರ್ಗಾ ಕಮಿಟಿ ವಾಯ್ಸ್ ಚೇರಮನ್ ಆಯ್.ಕೆ. ಮಿರ್ಜಾ, ಕಾರ್ಯದರ್ಶಿ ಡಿ.ಡಿ. ಕಾರಡಗಿ, ಕೆ.ಡಿ. ಸೂರಣಗಿ, ಎಫ್.ಎನ್. ಪಲ್ಲಿ, ಎನ್.ಎಚ್. ಸಿದ್ದಿ, ಎಸ್.ಎಚ್. ಶಮಲೆವಾಲೆ, ಎಂ.ಎಚ್. ಸಿದ್ದಾಪೂರ, ಎ.ಕೆ. ಸೂರಣಗಿ ಎಂ.ಎ. ಮುಳಗುಂದ, ಯು.ಡಿ. ಚೌರಿ, ಅಬ್ದುಲ್‌ಕರೀಂ ಕರೀಮ್‌ಖಾನವರ, ಜಾಫರಸಾಬ ಹುಬ್ಬಳ್ಳಿ, ಆಜಮ್ ಜಮಾದಾರ, ಜಾಕೀರ ಹವಾಲ್ದಾರ, ಪಿರ್ದೋಶ ಆಡೂರ, ಸಿಕಂದರ ಕಣಕೆ ಸೇರಿ ಹಲವರಿದ್ದರು.

ಎನ್.ಎಂ. ಗದಗ ಮಾತನಾಡಿ, ಉರುಸು ಕಾರ್ಯಕ್ರಮಕ್ಕೆ ನಾಡಿನಾದ್ಯಂತ ಸಾವಿರಾರು ಭಕ್ತರು ಆಗಮಿಸುವದರಿಂದ ಅವರಿಗೆ ತೊಂದರೆಯಾಗದಂತೆ ಇಲ್ಲಿನ ದರ್ಗಾ ಹಾಗೂ ಅಂಜುಮನ್ ಕಮಿಟಿ ವತಿಯಿಂದ ಅಗತ್ಯ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಆಗಮಿಸಿದ ಭಕ್ತರಿಗೆ ಕುಡಿಯುವ ನೀರು, ವಾಹನ ನಿಲುಗಡೆ, ವಸತಿ ಹಾಗೂ ಜನರ ದಟ್ಟಣೆ ನಿಯಂತ್ರಣಕ್ಕೆ ಸ್ವಯಂ ಸೇವಕರನ್ನು ನೇಮಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳಾಗದಂತೆ ಮುನ್ನೆಚ್ಚರಿಕೆ ಕೈಗೊಳ್ಳಲಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here