ವಿಜಯಸಾಕ್ಷಿ ಸುದ್ದಿ, ಗದಗ: ವಿಮಲ್ ರೆಸಾರ್ಟ್ ಪ್ರಾಯೋಜಕತ್ವದಲ್ಲಿ ನಡೆಯುತ್ತಿರುವ ಗದಗ ಪ್ರಿಮಿಯರ್ ಲೀಗ್-೨ನೇ ಆವೃತ್ತಿ ಫೈನಲ್ ಪಂದ್ಯವನ್ನು ಕಾಂಗ್ರೆಸ್‌ನ ಯುವ ಮುಖಂಡ ಕೃಷ್ಣಗೌಡ ಪಾಟೀಲ, ವಿಮಲ್ ರೆಸಾರ್ಟ್ ಮಾಲಕ ಪ್ರಕಾಶ ಶಾ ಉದ್ಘಾಟಿಸಿದರು.
ಕ್ರಷರ್ಸ್ ಹಾಗೂ ಟೈಟನ್ಸ್ ನಡುವೆ ನಡೆದ ಪಂದ್ಯದಲ್ಲಿ ಟೈಟನ್ಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಪ್ರಸಾದ ಕಲಬುರ್ಗಿ ೪೩, ಸಚಿನ್ ಜೋಗಿನ ೪೦, ಪವನ ಶಳ್ಳೇದ ೩೧ ರನ್ ಮಾಡಿ, ೧೫೭ ರನ್ ಗಳಿಸಿದರು. ರಾಮು ಬೆನಹಾಳ, ಕಾರ್ತಿಕ ಬಾಗಲಕೋಟ ತಲಾ ೨ ವಿಕೆಟ್ ಪಡೆದರು.
ಬ್ಯಾಟಿಂಗ್‌ಗೆ ಇಳಿದ ಕ್ರಷರ್ಸ್ ತಂಡದ ರಾಮು ಬೆನಹಾಳ ೨೩, ಅನಿತ್ ೨೨, ವೈಭವ ಬದಿ ೨೧ ರನ್ ಮಾಡಿದರು. ಸಮೀರ ಗುಳೇದಗುಡ್ಡ ೩, ಕಾರ್ತಿಕ ಹಂಸನೂರ ೨, ಜೈದ್ ಅತ್ತಾರ ೨ ವಿಕೆಟ್ ಪಡೆದರು. ಇದರೊಂದಿಗೆ ಕ್ರಷರ್ಸ್ ತಂಡ ಪಂದ್ಯವನ್ನು ಗೆದ್ದಿತು. ಪಂದ್ಯ ಪುರಷೋತ್ತಮ ಪ್ರಶಸ್ತಿಯನ್ನು ರಾಮು ಬೆನಹಾಳ ಪಡೆದರು. ಈ ಟೂರ್ನಿಯಲ್ಲಿ ಅತೀ ಹೆಚ್ಚು ರನ್ ಗಳಿಸಿದ ವಿನಯ ಬಾರಕೇರ ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿ ಪಡೆದರು. ಅತೀ ಹೆಚ್ಚು ವಿಕೆಟ್ ಪಡೆದ ಪವನ ಕೊರಳಿ ಉತ್ತಮ ಬೌಲರ್ ಪ್ರಶಸ್ತಿ ಪಡೆದರು. ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಜೈದ್ ಅತ್ತಾರ ಪಡೆದರು. ಯಮರ್ಜಿಂಗ್ ಫ್ಲೇಯರ್ ಆಗಿ ಪ್ರಜ್ವಲ್ ಮಿಟ್ಟಿ ಪ್ರಶಸ್ತಿ ಪಡೆದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆನಂದ ಪೋತ್ನಿಸ್, ಪಿ.ಆರ್. ಅಡವಿ, ಪ್ರಕಾಶ, ರಫೀಕ್ ಸೊಪ್ಪಿ, ವಿಕಾಸ ಜೈನ್, ಶೈಲೇಶ ಶಾ, ಬಸೀರ ನದೀಮ್ ಮುಲ್ಲಾ, ಸಮೀರ ನದೀಮ್ ಮುಲ್ಲಾ, ಅಭಿಷೇಕ ಹೊನ್ನಾವರ, ಕಿರಣ ಮಾಳೆಕೊಪ್ಪ ಪಾಲ್ಗೊಂಡಿದ್ದರು.