ಗದಗ: ಏಕಾಏಕಿ ಕುಸಿದ ಮನೆ ಮೇಲ್ಚಾವಣಿ – ಒಂದು ಆಕಳು ಸಾವು, ನಾಲ್ವರು ಬಚಾವ್!

0
Spread the love

ಗದಗ:- ಏಕಾಏಕಿ ಮನೆಯ ಮೇಲ್ಚಾವಣಿ ಕುಸಿದ ಪರಿಣಾಮ ಒಂದು ಆಕಳು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಡೋಣಿ ಗ್ರಾಮದಲ್ಲಿ ಜರುಗಿದೆ. ಅದೃಷ್ಟವಶಾತ್ ಘಟನೆಯಲ್ಲಿ ನಾಲ್ವರು ಸೇರಿ ಒಂದು ಆಕಳು ಬಚಾವ್ ಆಗಿದೆ.

Advertisement

ಗ್ರಾಮದ ಮಹದೇವಪ್ಪ ಕುಲಕರ್ಣಿ ಎಂಬವವರ ಮನೆ ಮೇಲ್ಚಾವಣಿ ಕುಸಿದಿದ್ದು, ಪವಾಡ ಎಂಬಂತೆ ಮನೆಯಲ್ಲಿದ್ದ ಮಹದೇವಪ್ಪ, ಪತ್ನಿ ಲಲಿತಮ್ಮ, ಮಕ್ಕಳಾದ ಪ್ರಶಾಂತ , ಶಂಕ್ರು ಬಚಾವ್ ಆಗಿದ್ದಾರೆ. ಆದರೆ ಮನೆಯಲ್ಲಿ ಕಟ್ಟಿದ್ದ ಎರಡು ಹಸುಗಳು ಪೈಕಿ.. ಒಂದು ಹಸು ಸಾವನ್ನಪ್ಪಿದ್ದರೆ, ಇನ್ನೊಂದು ಸೇಫ್ ಆಗಿದೆ.

ಇಂದು ಬೆಳ್ಳಂ ಬೆಳಗ್ಗೆ 5 ಗಂಟೆಗೆ ಈ ಘಟನೆ ಜರುಗಿದ್ದು, ಏಕಾಏಕಿ ಮನೆಯ ಮೇಲ್ಚಾವಣಿ ಕುಸಿದ ಹಿನ್ನೆಲೆಯಲ್ಲಿ ಮನೆಯಿಂದ ಕುಟುಂಬ ಓಡಿ ಬಂದಿದೆ. ಐದು ಅಂಕಣ ಮನೆಯಲ್ಲಿ ಮೂರು ಅಂಕಣದ ಮೇಲ್ಚಾವಣಿ ದನದ ಕೊಟ್ಟಿಗೆವರೆಗೆ ಸಂಪೂರ್ಣ ಕುಸಿತಗೊಂಡಿದೆ. ಪರಿಣಾಮ ಮನೆಯ ಪಡಲಾಸೆಯಲ್ಲಿ ಮಲಗಿದ್ದ ಕುಟುಂಬ ಜಸ್ಟ್ ಬಚಾವ್ ಆಗಿದೆ. ಘಟನೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮನೆ ಹಾನಿಯಾಗಿದ್ದು, ಮನೆ ಹಾನಿ ಕಂಡು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಮುಂಡರಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.


Spread the love

LEAVE A REPLY

Please enter your comment!
Please enter your name here