ವಿಜಯಪುರ: ಗಾಂಧಿ ನಮ್ಮ ರಾಷ್ಟ್ರಪಿತ ಅಲ್ಲ, ಪಾಕಿಸ್ತಾನ ರಾಷ್ಟ್ರಪಿತ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ದೇಶದ ಜನ ಒಂದು ಬಾರಿ ಪಾಕಿಸ್ತಾನ ನಾಶ ಆಗುವುದನ್ನು ನೋಡಬೇಕಿದೆ.
ನಮ್ಮ ದೇಶದಲ್ಲಿ ಮುಸ್ಲಿಮರಿಗಿಂತ ನಾಲಾಯಕರು ಕೆಲವರು ನಮ್ಮ ಕಾಂಗ್ರೆಸ್‌ನ ಹಿಂದೂಗಳಿದ್ದಾರೆ. ಮುಸ್ಲಿಮರಿಗೆ ಗಾಂಧೀಜಿ ಪಾಕಿಸ್ತಾನಕ್ಕೆ ಹೋಗಲು ತಿಳಿಸಿದ್ದಾರೆ. ಗಾಂಧಿ ನಮ್ಮ ರಾಷ್ಟ್ರಪಿತ ಅಲ್ಲ, ಪಾಕಿಸ್ತಾನ ರಾಷ್ಟ್ರಪಿತ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು ಬಿಜೆಪಿ ಸೇರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿಯಿಂದ ಹೊರಹಾಕಿದ ತಕ್ಷಣ ಮುಗಿದೋಯ್ತು. ಇನ್ನು ಬಿಜೆಪಿಗೆ ಬರಲ್ಲ ಅಂತಾ ಕೆಲವರು ತಿಳಿದುಕೊಂಡಿದ್ದಾರೆ ಎಂದು ಹುಚ್ಚರು. ಹೈಕಮಾಂಡ್ ನಿರಂತರ ನನ್ನ ಸಂಪರ್ಕದಲ್ಲಿದೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿದ ನಂತರ ನನ್ನನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.