ವಿಜಯಸಾಕ್ಷಿ ಸುದ್ದಿ, ಮುಳಗುಂದ : ಮೇ 28ರಂದು ಶಾಲಾ ಮಕ್ಕಳಿಗೆ ಬೇಸಿಗೆ ರಜೆ ಮುಕ್ತಾಯಗೊಂಡು ಮೇ 29ರಿಂದ ಪ್ರಾಥಮಿಕ ಹಾಗೂ ಪ್ರೌಢಶಾಲೆ ಆರಂಭವಾಗುತ್ತಿರುವ ಹಿನ್ನೆಲೇಯಲ್ಲಿ ಶಾಲಾ ಆವರಣ ಸೇರಿದಂತೆ ಬಿಸಿಯೂಟ ಪಾತ್ರೆ, ಆಹಾರ-ಧಾನ್ಯ ಸ್ವಚ್ಛತೆಯನ್ನು ಶಾಲಾ ಮುಖ್ಯ ಶಿಕ್ಷಕರು, ಅಡುಗೆ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಸೇರಿ ಸ್ವಚ್ಛತೆ ಕಾರ್ಯದಲ್ಲಿ ತೊಡಗಿರುವುದು ಮುಳಗುಂದ ಕ್ಲಸ್ಟರ್ ಸರಕಾರಿ ಶಾಲೆಗಳಲ್ಲಿ ಕಂಡು ಬಂದಿತು.
Advertisement
ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲಾ ಪ್ರಧಾನ ಗುರು ಪಿ.ಬಿ. ಕೆಂಚನಗೌಡರ ಮಾತನಾಡಿ, ಮೇ 29ರಿಂದ ಬೇಸಿಗೆ ರಜೆ ಮುಗಿಸಿಕೊಂಡು ಶಾಲೆಗೆ ಬರುವ ಮಕ್ಕಳ ಸ್ವಾಗತಕ್ಕೆ ಶಾಲಾ ಆವರಣ ಸೇರಿದಂತೆ ಬಿಸಿಯೂಟದ ಆಹಾರ, ಪಾತ್ರೆಗಳ ಸ್ವಚ್ಛತೆ ಕಾರ್ಯ ಮಾಡಲಾಗಿದೆ ಎಂದರು.
ಆರ್.ಬಿ. ಡಂಬಳ, ಅಡುಗೆ ಸಿಬ್ಬಂದಿ ಲಕ್ಷ್ಮಿ ಬೇಂದ್ರೆ, ರೇಣುಕಾ ಬಗಾಡೆ ಹಾಗೂ ವಿದ್ಯಾರ್ಥಿಗಳು ಇದ್ದರು.