ವಿಜಯಸಾಕ್ಷಿ ಸುದ್ದಿ, ಗದಗ: ರಾಷ್ಟ್ರೀಯ ಸೇವಿಕಾ ಸಮಿತಿ ಗದಗ ಶಹರ ಘಟಕದ ವತಿಯಿಂದ ಬೆಟಗೇರಿಯ ಸೇವಾ ಭಾರತಿ ಟ್ರಸ್ಟ್ (ರಿ.)ನ ಅಮೂಲ್ಯ ವಿಶೇಷ ದತ್ತು ಸ್ವೀಕಾರ ಸಂಸ್ಥೆಯ ‘ನಂದಗೋಕುಲ’ದಲ್ಲಿ ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿ–ಗೋಕುಲಾಷ್ಟಮಿಯನ್ನು ಸಂಭ್ರಮ ಹಾಗೂ ಭಕ್ತಿಭಾವದಿಂದ ಆಚರಿಸಲಾಯಿತು.
ವಿಶೇಷ ಆಚರಣೆಯಲ್ಲಿ ಕೇಂದ್ರದ ಪುಟಾಣಿಗಳೊಂದಿಗೆ ಸೇವಿಕಾ ಸಮಿತಿ ಸದಸ್ಯರ ಮಕ್ಕಳು ಕೃಷ್ಣ–ರಾಧೆಯ ವೇಷದಲ್ಲಿ ಪಾಲ್ಗೊಂಡು ಸಂಭ್ರಮವನ್ನು ಇಮ್ಮಡಿಗೊಳಿಸಿದರು. ಮಕ್ಕಳ ಮೊಗದಲ್ಲಿ ಮೂಡಿದ ಕೃಷ್ಣನ ನಗು ಹಾಗೂ ಭಕ್ತಿಗೀತೆಗಳು ಕಾರ್ಯಕ್ರಮಕ್ಕೆ ವಿಶೇಷ ಮೆರಗು ನೀಡಿದವು.
ಈ ಸಂದರ್ಭದಲ್ಲಿ ಪುಷ್ಪಾ ಕಾಮಾರ್ತಿ, ಅನಸೂಯಾ ಶೀಲವಂತರ, ಅಶ್ವಿನಿ ಶಿಗ್ಗಾಂವಿ, ರಜನಿ ಪಂಥರ, ವೈಷ್ಣವಿ ರಬ್ಬನಗೌಡರ, ಲಲಿತಾ ಮೇರವಾಡೆ, ಅನುಪಮಾ ಹೊಸಮನಿ, ಮೇಘಾ ಕುಲಕರ್ಣಿ, ನಾಗವೇಣಿ ಕಟ್ಟಿಮನಿ, ಡಾ. ಪ್ರಕಾಶ ಹೊಸಮನಿ, ವಿದಾರ್ಥ ಹೊಸಮನಿ, ಸಿಂಚನಾ ಸಜ್ಜನರ, ಸಮೃದ್ಧಿ ಸಜ್ಜನರ ಸೇರಿದಂತೆ ಸಮಿತಿಯ ಪ್ರಮುಖರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ನಂದಗೋಕುಲ ಕೇಂದ್ರದ ಆಯಾಗಳಿಗೆ ರಕ್ಷಾಬಂಧನ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು ಎಂದು ವಿಶೇಷ ದತ್ತು ಸ್ವೀಕಾರ ಕೇಂದ್ರದ ಗುರುಸಿದ್ಧಪ್ಪ ಕೊಣ್ಣೂರ ತಿಳಿಸಿದ್ದಾರೆ.



