ಬೆಂಗಳೂರು: ಸತತ ಏರಿಕೆಯ ಬಳಿಕ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಗುರುವಾರ ಇಳಿಕೆಯಾಗಿದೆ. ಚಿನ್ನದ ಬೆಲೆ 130 ರೂ ಕಡಿಮೆಯಾಗಿದ್ದು, ಬೆಳ್ಳಿ ಬೆಲೆ ಪ್ರತಿ ಗ್ರಾಮ್ಗೆ 9 ರೂ ತಗ್ಗಿದೆ. ಅಪರಂಜಿ (24 ಕ್ಯಾರಟ್) ಚಿನ್ನದ ಬೆಲೆ ಗ್ರಾಮ್ಗೆ 13,800 ರೂಗೆ ಇಳಿಕೆಯಾಗಿದೆ.
ವಿದೇಶಿ ಮಾರುಕಟ್ಟೆಯಲ್ಲಿಯೂ ಚಿನ್ನದ ದರ ಕುಸಿತ ಕಂಡಿದ್ದು, ಇದರ ಪರಿಣಾಮ ದೇಶೀಯ ಮಾರುಕಟ್ಟೆಯಲ್ಲೂ ಬೆಲೆ ಇಳಿಕೆಯಾಗಿದೆ. ಬೆಳ್ಳಿ ಬೆಲೆಯಲ್ಲಿ ಹೆಚ್ಚಿನ ಪ್ರಮಾಣದ ಇಳಿಕೆ ಕಂಡುಬಂದಿದ್ದು, ಪ್ರತಿ ಗ್ರಾಮ್ಗೆ 9 ರೂ ಕಡಿಮೆಯಾಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 1,26,500 ರೂ ಆಗಿದ್ದರೆ, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,38,000 ರೂ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 25,200 ರೂ ಆಗಿದೆ.
ಬೆಂಗಳೂರಿನಲ್ಲಿ 10 ಗ್ರಾಮ್ ಚಿನ್ನದ ಬೆಲೆ 1,26,500 ರೂ ಇದ್ದು, 100 ಗ್ರಾಮ್ ಬೆಳ್ಳಿ ಬೆಲೆ 25,200 ರೂ ಆಗಿದೆ. ತಮಿಳುನಾಡು, ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ಬೆಳ್ಳಿ ಬೆಲೆ 27,200 ರೂವರೆಗೆ ದಾಖಲಾಗಿದೆ.
ಭಾರತದಲ್ಲಿನ ಚಿನ್ನ–ಬೆಳ್ಳಿ ಬೆಲೆ (ಜನವರಿ 8)
-
24 ಕ್ಯಾರಟ್ ಚಿನ್ನ (1 ಗ್ರಾಂ): ₹13,800
-
22 ಕ್ಯಾರಟ್ ಚಿನ್ನ (1 ಗ್ರಾಂ): ₹12,650
-
18 ಕ್ಯಾರಟ್ ಚಿನ್ನ (1 ಗ್ರಾಂ): ₹10,350
-
ಬೆಳ್ಳಿ (1 ಗ್ರಾಂ): ₹252
ಬೆಂಗಳೂರಿನ ಚಿನ್ನ–ಬೆಳ್ಳಿ ಬೆಲೆ
-
24 ಕ್ಯಾರಟ್ ಚಿನ್ನ (1 ಗ್ರಾಂ): ₹13,800
-
22 ಕ್ಯಾರಟ್ ಚಿನ್ನ (1 ಗ್ರಾಂ): ₹12,650
-
ಬೆಳ್ಳಿ (1 ಗ್ರಾಂ): ₹252
ವಿವಿಧ ನಗರಗಳಲ್ಲಿನ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಂ)
-
ಬೆಂಗಳೂರು: ₹12,650
-
ಚೆನ್ನೈ: ₹12,750
-
ಮುಂಬೈ: ₹12,650
-
ದೆಹಲಿ: ₹12,665
-
ಕೋಲ್ಕತಾ: ₹12,650
-
ಕೇರಳ: ₹12,650
-
ಅಹ್ಮದಾಬಾದ್: ₹12,655
-
ಜೈಪುರ್: ₹12,665
-
ಲಕ್ನೋ: ₹12,665
-
ಭುವನೇಶ್ವರ್: ₹12,650



