ಬೆಂಗಳೂರು: ನಂದಿನಿ ಮೊಸರಿನ ದರ ಇಂದಿನಿಂದ ಇಳಿಕೆಯಾಗಿದ್ದು, ಗ್ರಾಹಕರಿಗೆ ಕೊಂಚ ರಿಲೀಫ್ ಸಿಕ್ಕಿದೆ.
ಕರ್ನಾಟಕ ಸಹಕಾರ ಹಾಲು ಉತ್ಪಾದಕರ ಮಹಾಮಂಡಳ (ಕೆಎಂಎಫ್) ಒಂದು ಲೀಟರ್ ಮೊಸರಿನ ಬೆಲೆಯನ್ನು 2 ರೂಪಾಯಿ ಕಡಿತಗೊಳಿಸಿದೆ.
ರಾಜ್ಯದ ಹಾಲು ಉತ್ಪಾದಕ ರೈತರ ಮನವಿಯ ಮೇರೆಗೆ ಕಳೆದ ನವೆಂಬರ್ 1ರಿಂದ ಅನ್ವಯವಾಗುವಂತೆ ನಂದಿನಿ ಹಾಲು ಮತ್ತು ಮೊಸರಿನ ಮಾರಾಟ ದರವನ್ನು ಹೆಚ್ಚಿಸಲಾಗಿತ್ತು. ಇದರಿಂದ ಮೊಸರಿನ ಬೆಲೆಯೂ ಏರಿಕೆಯಾಗಿತ್ತು.
ಆದರೆ, ಗ್ರಾಹಕರ ಹಿತದೃಷ್ಟಿಯಿಂದ ಮೊಸರಿನ ದರವನ್ನು ಪ್ರತಿ ಲೀಟರ್ಗೆ 2 ರೂಪಾಯಿ ಇಳಿಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೆಎಂಎಫ್ಗೆ ಸೂಚನೆ ನೀಡಿದ್ದರು. ಇದೀಗ ಸಿಎಂ ನಿರ್ದೇಶನದಂತೆ ಕೆಎಂಎಫ್ ದರ ಕಡಿತಗೊಳಿಸಿದೆ.
ನಂದಿನಿ ಮೊಸರಿನ ಪರಿಷ್ಕೃತ ದರ ಹೀಗಿದೆ:
-
ಅರ್ಧ ಲೀಟರ್ ಪ್ಯಾಕ್: 34 ರೂ. ಇದ್ದ ದರ 33 ರೂ.ಗೆ ಇಳಿಕೆ.
-
ಒಂದು ಲೀಟರ್ ಪ್ಯಾಕ್: 68 ರೂ. ಇದ್ದ ದರ 66 ರೂ.ಗೆ ಇಳಿಕೆ.
ನವೆಂಬರ್ 1ರಂದು ಮೊಸರಿನ ದರವನ್ನು ಪ್ರತಿ ಲೀಟರ್ಗೆ 14 ರೂ. ಹಾಗೂ ಅರ್ಧ ಲೀಟರ್ಗೆ 6 ರೂ. ಹೆಚ್ಚಿಸಲಾಗಿತ್ತು. ಇದರಿಂದ ಒಂದು ಲೀಟರ್ ಮೊಸರಿನ ಬೆಲೆ 54 ರೂ.ನಿಂದ 68 ರೂ.ಗೆ, ಅರ್ಧ ಲೀಟರ್ ಬೆಲೆ 28 ರೂ.ನಿಂದ 34 ರೂ.ಗೆ ಏರಿಕೆಯಾಗಿತ್ತು. ಇದೀಗ ಮತ್ತೆ ದರ ಇಳಿಕೆಯಾಗಿರುವುದು ಗ್ರಾಹಕರಿಗೆ ಸಮಾಧಾನ ತಂದಿದೆ.









