ಯೆಲ್ಲೋ ಲೈನ್‌ ಪ್ರಯಾಣಿಕರಿಗೆ ಗುಡ್‌ ನ್ಯೂಸ್: ಕೆಲವೇ ದಿನಗಳಲ್ಲಿ 5ನೇ ಮೆಟ್ರೋ ರೈಲು ಸಂಚಾರ‌

0
Spread the love

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ ಯೆಲ್ಲೋ ಲೈನ್  ಮೆಟ್ರೋ  ಪ್ರಯಾಣಿಕರಿಗೆ ಗುಡ್ ನ್ಯೂಸ್ ಅನ್ನು ಬಿಎಂಆರ್‌ಸಿಎಲ್ ನೀಡಿದೆ.  ಶೀಘ್ರದಲ್ಲೇ ಯೆಲ್ಲೋ ಮಾರ್ಗಕ್ಕೆ 5ನೇ ರೈಲು ಬರಲಿದೆ.  ಹೌದು  ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯೆಲ್ಲೋ ಮೆಟ್ರೋ ಲೈನ್​ನ್ನು ಆಗಸ್ಟ್ 10 ರಂದು ಉದ್ಘಾಟಿಸಿದ್ದರು.

Advertisement

18.82 ಕಿಮೀ ಉದ್ದದ ಯೆಲ್ಲೋ ಲೈನ್​ನಲ್ಲಿ ಆರ್.ವಿ ರಸ್ತೆ ಮತ್ತು ಬೊಮ್ಮಸಂದ್ರದ ನಡುವೆ 3 ರೈಲುಗಳಷ್ಟೇ ಸಂಚರಿಸುತ್ತಿದ್ದವು. 25 ನಿಮಿಷಗಳಿಗೊಂದು ರೈಲಿನ ಸೇವೆಯಿತ್ತು. ಸೆಪ್ಟೆಂಬರ್ 10 ರಂದು ರೈಲಿನ ಸಂಖ್ಯೆಯನ್ನು ನಾಲ್ಕಕ್ಕೇರಿಸಿದ್ದರು. ಅದರೊಂದಿಗೆ 19 ನಿಮಿಷಗಳಿಗೊಮ್ಮೆ ಒಂದು ರೈಲು ಸೇವೆ ಒದಗಿಸುತ್ತಿತ್ತು. ಈ ವ್ಯವಸ್ಥೆಗೀಗ ಇನ್ನೊಂದು ರೈಲು ಸೇರುವ ಸೂಚನೆಯಿದೆ.

ಹೊಸ ಬೊಗಿಗಳು ಕೋಲ್ಕತ್ತಾದ ಟೀಟಾಘರ್ ರೈಲ್ವೇ ಸಿಸ್ಟಮ್ ಲಿಮಿಟೆಡ್​ನಿಂದ ಹೊರಟು ಸೆಪ್ಟೆಂಬರ್ 19 ರಂದು ಬೆಂಗಳುರು ತಲುಪಿತ್ತು. ಬೆಂಗಳೂರಿನಲ್ಲಿ ಎಲ್ಲಾ ಬೋಗಿಗಳ ಜೋಡಣೆಯಾದ ಬಳಿಕ 20 ದಿನಗಳ ಪರೀಕ್ಷೆ ನಡೆಯಲಿದೆ. ಸಿಗ್ನಲ್, ಟೆಲಿಕಮ್ಯೂನಿಕೇಷನ್ ಮತ್ತು ಪವರ್ ಸಪ್ಲೈಗಳು ಪರೀಕ್ಷೆಗೆ ಒಳಪಡಲಿವೆ ಎಂದು BMRCL ಅಧಿಕಾರಿಗಳು ತಿಳಿಸಿದ್ದಾರೆ.

ಹೊಸದಾಗಿ ಸೇರ್ಪಡೆಗೊಳ್ಳಲಿರುವ ಈ 5 ನೇ ರೈಲಿನಿಂದ ಮೆಟ್ರೋ ಎದುರಿಸುತ್ತಿರುವ ಅತಿದೊಡ್ಡ ಸಮಸ್ಯೆಯಾದ ಜನದಟ್ಟಣೆ ತಕ್ಕ ಮಟ್ಟಿಗೆ ಕಡಿಮೆಯಾಗಲಿದೆ. ನೂತನ ರೈಲು ಸೇವೆ ಪೂರ್ತಿಯಾಗಿ ಸಂವಹನ ಆಧಾರಿತ ರೈಲು ನಿಯಂತ್ರಣಕ್ಕೆ (CBTC) ಒಳಪಟ್ಟಿದೆ.

ಇದರಿಂದಾಗಿ ನಮ್ಮ ಮೆಟ್ರೋದಲ್ಲಿ ಪ್ರಪ್ರಥಮ ಬಾರಿಗೆ ಚಾಲಕ ರಹಿತ ರೈಲು ಸಂಚಾರವಾಗಲಿದೆ. ಈ  ವ್ಯವಸ್ಥೆಯು ಸೈದ್ಧಾಂತಿಕವಾಗಿ  ಎರಡು ರೈಲು ಸಂಚಾರದ ಮಧ್ಯೆ ಸಮಯವನ್ನು ಉಳಿಸುವ ಭರವಸೆ ನೀಡಿದೆ. ಆರಂಭಿಕ ಹಂತದಲ್ಲಿ ತರಬೇತಿ ಪಡೆದ ಲೋಕೋಮೋಟಿವ್ ಪೈಲಟ್‌ಗಳಿಂದ ಹಸ್ತಚಾಲಿತ ಕಾರ್ಯಾಚರಣೆಯು ಮುಂದುವರೆಯಲಿದೆ.


Spread the love

LEAVE A REPLY

Please enter your comment!
Please enter your name here