ಚಿಕ್ಕಮಗಳೂರು: ಸರ್ಕಾರದ ಭಕ್ಷಣೆಯ ದಾಹಕ್ಕೆ ಸರ್ಕಾರಿ ನೌಕರರು ಬಲಿಯಾಗುತ್ತಿದ್ದಾರೆ ಎಂದು ಎಮ್‍ಎಲ್‍ಸಿ ಸಿ.ಟಿ ರವಿ ಕಿಡಿಕಾರಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಸಂಬಳ ನೀಡದೇ ಇರುವುದರ ಕಾರಣ ನೀಡಿ ಡೆತ್ ನೋಟ್ ಬರೆದಿಟ್ಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸರ್ಕಾರಕ್ಕೆ ಹೃದಯ ಇದೆಯೋ? ಇಲ್ವೋ ಗೊತ್ತಿಲ್ಲ,
ಮಾನವೀಯತೆ ಸತ್ತಿರೋದು ಗೊತ್ತಾಗ್ತಿದೆ. ಇದು ಸರ್ಕಾರದ ಪ್ರಾಯೋಜಿತ ಕೊಲೆ, ಇದರ ಹೊಣೆಯನ್ನು ರಾಜ್ಯ ಸರ್ಕಾರವೇ ಹೊರಬೇಕು. ಸರ್ಕಾರದ ಭಕ್ಷಣೆಯ ದಾಹಕ್ಕೆ ಸರ್ಕಾರಿ ನೌಕರರು ಬಲಿಯಾಗುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಈ ಸಾವಿಗೆ ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಯೇ ಪ್ರಾಯಶ್ಚಿತ್ತ. ಆದರೆ ಸರ್ಕಾರ ಹೃದಯಹೀನ ಸರ್ಕಾರವಾಗಿ, ಮಾನವೀಯತೆ ಸತ್ತಂತೆ ವರ್ತಿಸುತ್ತಿದೆ. ದಪ್ಪ ಚರ್ಮ ಅನ್ನೋಣ ಅಂದ್ರೆ ಆ ದಪ್ಪ ಚರ್ಮಕ್ಕಾದ್ರು ಸ್ವಲ್ಪ ನಾಟುತ್ತೆ. ಚಡಿ ಏಟು ನಾಟದಿದ್ರು, ಕರೆಂಟ್ ಶಾಕ್ ಆದ್ರೂ ನಾಟುತ್ತೆ. ಇದು ದಪ್ಪ ಚರ್ಮವೋ, ಸತ್ತಿರೋ ಚರ್ಮವೋ ಗೊತ್ತಾಗ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.