• About
  • Advertise
  • Privacy & Policy
  • Contact
Thursday, October 29, 2026
Vijaya Sakshi News
Advertisement
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
  • Home
  • Gadag News
  • Dharwad
  • Crime News
  • Entertainment
  • Districts
    • Bagalkot
    • Belgaum
    • Bellary
    • Bengaluru City
    • Bengaluru News
    • Bengaluru Rural
    • Bidar
    • Chamarajanagar
    • Chikkaballapur
    • Chikkamagaluru
    • Chitradurga
    • Davanagere
    • Hassan
    • Haveri
    • hubballi
    • Kalaburagi
    • Kodagu
  • E Paper
No Result
View All Result
Vijaya Sakshi News
  • Home
  • Gadag News
  • Karnataka News
  • Crime News
  • Politics News
  • Bengaluru News
  • Entertainment
  • Life Style
  • Sports News
Home Karnataka News

ಅಂಬೇಡ್ಕರ್ ಅವರು ತಮ್ಮ ಜ್ಞಾನವನ್ನು ಸಮಾಜದ ಬದಲಾವಣೆಗೆ ಬಳಸಿದ ಮಹಾನ್ ಚೇತನ: ಸಿಎಂ ಸಿದ್ದರಾಮಯ್ಯ

Vijaya Sakshi News Desk by Vijaya Sakshi News Desk
October 18, 2025
in Karnataka News
ಕರ್ನಾಟಕ ಬಜೆಟ್ ಮಂಡನೆ ದಿನಾಂಕ ಘೋಷಿಸಿದ ಸಿಎಂ ಸಿದ್ದರಾಮಯ್ಯ!
0
SHARES
0
VIEWS
Share on Facebook

ಮೈಸೂರು: ಸಂಘ ಪರಿವಾರ ಮತ್ತು RSS ನವರು ಅಂಬೇಡ್ಕರ್ ಅವರ ಸಂವಿಧಾನವನ್ನು ವಿರೋಧಿಸಿದ್ದರು. ಈಗಲೂ ವಿರೋಧಿಸುತ್ತಿದ್ದಾರೆ. ಹೀಗಾಗಿ ಇವರ ಬಗ್ಗೆ ಎಚ್ಚರಿಕೆ ಇಂದ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆಕೊಟ್ಟರು.

ಮೈಸೂರು ವಿಶ್ವ ವಿದ್ಯಾಲಯದ ರಜತ ಮಹೋತ್ಸವ ಹಾಗೂ ನೂತನ ಜ್ಞಾನ ದರ್ಶನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು. ಅಂಬೇಡ್ಕರ್ ಅವರು ತಮ್ಮ ಜ್ಞಾನವನ್ನು ಸಮಾಜದ ಬದಲಾವಣೆಗೆ ಬಳಸಿದ ಮಹಾನ್ ಚೇತನ. ಇವರು ಸಮಾಜವನ್ನು ಅರ್ಥ ಮಾಡಿಕೊಳ್ಳಲು ಜ್ಞಾನ‌ ಸಂಪಾದನೆ ಮಾಡಿದರು. ಬಳಿಕ ತಮ್ಮ ಜ್ಞಾನವನ್ನು ಬದುಕಿನುದ್ದಕ್ಕೂ ಸಮಾಜದ ಬದಲಾವಣೆಗೆ ಬಳಸಿದರು ಎಂದು ಮೆಚ್ಚುಗೆ ಸೂಚಿಸಿದರು.

ಅಂಬೇಡ್ಕರ್ ಅವರ ಹೆಸರಲ್ಲಿ ಬಿಜೆಪಿಯವರು, ಸಂಘ ಪರಿವಾರದವರು ಅಪಪ್ರಚಾರ ಮಾಡುತ್ತಿದ್ದಾರೆ. ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಕಾಂಗ್ರೆಸ್ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಸತ್ಯ ಏನೆಂದರೆ “ನನ್ನನ್ನು ಚುನಾವಣೆಯಲ್ಲಿ ಸೋಲಿಸಿದ್ದು ಸಾವರ್ಕರ್ ಮತ್ತು ಡಾಂಗೆ” ಎಂದು ಸ್ವತಃ ಅಂಬೇಡ್ಕರ್ ಅವರೇ ತಮ್ಮದೇ ಹಸ್ತಾಕ್ಷರದಲ್ಲಿ ಬರೆದಿದ್ದಾರೆ. ಇಂಥಾ ಸತ್ಯಗಳನ್ನು ಸಮಾಜದ ಮುಂದಿಟ್ಟು ಸಂಘ ಪರಿವಾರದ ಸುಳ್ಳುಗಳನ್ನು ಬಹಿರಂಗಗೊಳಿಸಬೇಕು ಎಂದು ಕರೆ ನೀಡಿದರು.

ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಅನ್ನು ನಾನು ಸ್ಥಾಪಿಸಿದ್ದು ಏಕೆಂದರೆ ಅವರನ್ನು ಓದಿಕೊಂಡವರು ಅವರ ಮಾರ್ಗದಲ್ಲಿ ನಡೆಯಲಿ ಉದ್ದೇಶದಿಂದ. ಅಂಬೇಡ್ಕರ್ ಅವರಿಗೆ ಅಂಬೇಡ್ಕರ್ ಅವರೇ ಸಾಟಿ. ಮತ್ತೊಬ್ಬ ಅಂಬೇಡ್ಕರ್ ಬರಲು ಸಾಧ್ಯವಿಲ್ಲ. ಆದರೆ ಪ್ರತಿಯೊಬ್ಬರೂ ಅವರ ಆದರ್ಶಗಳನ್ನು ಪಾಲಿಸಿ ಅವರ ಹಾದಿಯಲ್ಲಿ ನಡೆಯಬೇಕು ಎಂದರು.

ವಿಶ್ವದ ಎಲ್ಲಾ ಸಂವಿಧಾನಗಳನ್ನು ಓದಿ, ಜೀರ್ಣಿಸಿಕೊಂಡು ಭಾರತೀಯ ಸಮಾಜಕ್ಕೆ ಅನ್ವಯ ಆಗುವ ವಿಶ್ವ ಶ್ರೇಷ್ಠ ಸಂವಿಧಾನವನ್ನು ಅಂಬೇಡ್ಕರ್ ಅವರು ಭಾರತಕ್ಕೆ ಕೊಟ್ಟರು ಎಂದು ವಿವರಿಸಿದರು.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಸನಾತನಿ ಒಬ್ಬ ಶೂ ಎಸೆದಿರುವುದು ಸನಾತನಿಗಳು , ಪಟ್ಟಭದ್ರರು ಸಮಾಜದಲ್ಲಿ ಇನ್ನೂ ಇದ್ದಾರೆ ಎನ್ನುವುದಕ್ಕೆ ಸಾಕ್ಷಿ ಎಂದರು.

ಶೂ ಎಸೆತವನ್ನು ದಲಿತರಷ್ಟೇ ಅಲ್ಲ. ಪ್ರತಿಯೊಬ್ಬರೂ ವಿರೋಧಿಸಬೇಕು. ಹೀಗಾದಾಗ ಮಾತ್ರ ಸಮಾಜ ಬದಲಾವಣೆಯ ಹಾದಿಯಲ್ಲಿದೆ ಎಂದು ಸಮಾಧಾನ ಪಟ್ಟುಕೊಳ್ಳಬಹುದು ಎಂದರು.

ನಾನು ಬುದ್ದ, ಬಸವ, ಅಂಬೇಡ್ಕರ್ ವಿಚಾರದಲ್ಲಿ ನಂಬಿಕೆ ಇಟ್ಟುಕೊಂಡಿದ್ದೀನಿ. ಈ ಕಾರಣಕ್ಕೇ ವೈಚಾರಿಕತೆ, ವೈಜ್ಞಾನಿಕತೆ ಬೆಳೆಯಬೇಕು ಎಂದು ಆಶಿಸುತ್ತೇನೆ. ವಿಜ್ಞಾನ ಓದಿಯೂ ಮೂಢ ನಂಬಿಕೆ ಆಚರಿಸುವವರಾಗಬೇಡಿ ಎಂದರು.

ಮೈಸೂರು ವಿವಿಯಲ್ಲಿ ಅಂಬೇಡ್ಕರ್ ಅಧ್ಯಯನ‌ ಕೇಂದ್ರ ಆಗಿ 25 ವರ್ಷಗಳಾಗಿವೆ. ಈ ಸಂದರ್ಭದಲ್ಲಿ “ವಿಶ್ವ ಜ್ಞಾನಿ ಅಂಬೇಡ್ಕರ್ ಸಭಾ ಭವನ” ಲೋಕಾರ್ಪಣೆ ಆಗುತ್ತಿರುವುದು ಸ್ವಾಗತಾರ್ಹ ಎಂದರು. ಎಲ್ಲರಿಗೂ ಸಮಾನ ಅವಕಾಶಗಳು ಸಿಗದೇ ಇದ್ದುದರಿಂದ ಅಸಮಾನತೆ ಸೃಷ್ಟಿಯಾಗಿದೆ. ವಿದ್ಯೆ ಯಾರಪ್ಪನ ಮನೆ ಆಸ್ತಿ ಅಲ್ಲ. ಅವಕಾಶಗಳು ಸಿಗಬೇಕು ಅಷ್ಟೆ. ಅವಕಾಶ ಸಿಕ್ಕಾಗ ವಿದ್ವಾಂಸರಾಗುತ್ತಾರೆ, ಜ್ಞಾನಿ ಆಗುತ್ತಾರೆ. ಅಂಬೇಡ್ಕರ್ ಅವರು ತಮ್ಮ ಜ್ಞಾನವನ್ನು ಸಮಾಜದ ಬದಲಾವಣೆಗೆ ಬಳಸಿದ ಮಹಾನ್ ಚೇತನ ಎಂದರು.

ನಿಮ್ಮ ಸಹವಾಸ ಸರಿಯಾಗಿರಲಿ

ಸಮಾಜದ ಪರವಾಗಿ ಇರುವವರ ಜೊತೆ ನಿಮ್ಮ ಸಹವಾಸ ಇರಲಿ. ಸಮಾಜ ಬದಲಾವಣೆಯ ವಿರೋಧಿಗಳ, ಸನಾತನಿಗಳ ಸಹವಾಸ ಬೇಡ ಎಂದು ಕರೆ ನೀಡಿದರು.

Tags: BreakingkannadanewsKarnatakaNewsHeadlinessiddaramaihVijayasakshivijayasakshinews
ShareSendShare
Previous Post

ಪ್ರೇಯಸಿ ಜತೆ 8 ದಿನಗಳಿಂದ ಬೆಂಗಳೂರಿನ ಲಾಡ್ಜ್ʼ​​ನಲ್ಲಿದ್ದ ಯುವಕ ಸಾವು!

Next Post

ಸರ್ಕಾರದ ಭಕ್ಷಣೆಯ ದಾಹಕ್ಕೆ ಸರ್ಕಾರಿ ನೌಕರರು ಬಲಿಯಾಗುತ್ತಿದ್ದಾರೆ: ಸಿ.ಟಿ ರವಿ ಕಿಡಿ

Vijaya Sakshi News Desk

Vijaya Sakshi News Desk

Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

Next Post
ಭಯೋತ್ಪಾದನೆ ಕೇಂದ್ರಗಳಿಗೆ ನೀರು ಗೊಬ್ಬರ ಹಾಕಿ ಕಾಂಗ್ರೆಸ್‌ʼನವರು ಪೋಷಿಸುತ್ತಿದ್ದಾರೆ: ಸಿ.ಟಿ ರವಿ ಆರೋಪ

ಸರ್ಕಾರದ ಭಕ್ಷಣೆಯ ದಾಹಕ್ಕೆ ಸರ್ಕಾರಿ ನೌಕರರು ಬಲಿಯಾಗುತ್ತಿದ್ದಾರೆ: ಸಿ.ಟಿ ರವಿ ಕಿಡಿ

Stay Connected test

  • 24k Followers
  • 99 Subscribers
  • Trending
  • Comments
  • Latest

ಪೊಲೀಸ್ ವೇಷದಲ್ಲಿ ಅಮಾಯಕರಿಗೆ ಬೆದರಿಕೆ: ಸಂಜಯ ಕೊಪ್ಪದ ಬಂಧನಕ್ಕೆ ಸರ್ಕಾರದ ಮುದ್ರೆ

October 24, 2026
ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

ಧಾರಾಕಾರ ಮಳೆಗೆ ತತ್ತರಿಸಿದ ಗದಗ: ಸಿಡಿಲು ಬಡಿದು ಕುರಿಗಾಯಿ ಸಾವು, 5 ಆಡುಗಳು ಬಲಿ

October 23, 2026
Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

Crime News: ಅರಣ್ಯ ಇಲಾಖೆ ನೌಕರ ವಿಠಲ್ ಜೋನಿ ಆತ್ಮಹತ್ಯೆ: ಕಾರಣ ನಿಗೂಢ

October 25, 2026
ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

ಗದಗದಲ್ಲಿ ಜೆಸಿಬಿ ಘರ್ಜನೆ: ಹೆದ್ದಾರಿ ಪಕ್ಕದಲ್ಲಿ ನಿರ್ಮಿಸಿದ್ದ ಬಡವರ ಅಂಗಡಿಗಳು ನೆಲಸಮ, ಅಪಘಾತಗಳ ಆತಂಕಕ್ಕೆ ಬ್ರೇಕ್‌!

October 23, 2026
Single Post Template – Fast News

ದೇವಸ್ಥಾನದಲ್ಲಿ 3 ಕೊಲೆ: ಹುಂಡಿಗಳ್ಳರ ಅಮಾನುಷ ಕೃತ್ಯ

0
Single Post Template – Fast News

ಕೋಡಿಹಳ್ಳಿಯವರಿಗೆ ಇಷ್ಟೊಂದು ಅಜ್ಞಾನ ಇದೆ ಅಂತ ಗೊತ್ತಿರಲಿಲ್ಲ: ಬಿ.ಸಿ.ಪಾಟೀಲ

0
Single Post Template – Fast News

ಕತ್ತಲಲ್ಲಿ ಕ್ವಾರಂಟೈನ್ ಸೆಂಟರ್; ಪರದಾಡಿದ ಕೊವಿಡ್ ರೋಗಿಗಳು!

0
Single Post Template – Fast News

ನಗರಸಭೆ ಆಯುಕ್ತರ ಕುರ್ಚಿ ಮಾರಾಟವಾಯ್ತೆ?
ಉಸ್ತುವಾರಿ ಸಚಿವರು ತಮ್ಮ ಹಠ ಸಾಧಿಸಿಯೇ ಬಿಟ್ಟರೆ?

0
ಯುವಕರಲ್ಲೂ ಹೆಚ್ಚುತ್ತಿದೆ ಸ್ಟ್ರೋಕ್ ಅಪಾಯ: ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

ಯುವಕರಲ್ಲೂ ಹೆಚ್ಚುತ್ತಿದೆ ಸ್ಟ್ರೋಕ್ ಅಪಾಯ: ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

October 28, 2026
ಚಂದನ್ ಶೆಟ್ಟಿ ‘ಮೈಮಾಟ’ ಹಾಡಿನ ವಿವಾದಕ್ಕೆ ಸ್ಪಷ್ಟನೆ: ವೈಯಕ್ತಿಕ ಜೀವನಕ್ಕೆ ಲಿಂಕ್ ಮಾಡಬೇಡಿ ಎಂದ ಗಾಯಕ

ಚಂದನ್ ಶೆಟ್ಟಿ ‘ಮೈಮಾಟ’ ಹಾಡಿನ ವಿವಾದಕ್ಕೆ ಸ್ಪಷ್ಟನೆ: ವೈಯಕ್ತಿಕ ಜೀವನಕ್ಕೆ ಲಿಂಕ್ ಮಾಡಬೇಡಿ ಎಂದ ಗಾಯಕ

October 28, 2026
ಕಬ್ಬು ಬೆಳೆಗಾರರ ಹೋರಾಟ 4ನೇ ದಿನಕ್ಕೆ: ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ಸರ್ಕಾರಕ್ಕೆ ಡೆಡ್‌ಲೈನ್!

ಕಬ್ಬು ಬೆಳೆಗಾರರ ಹೋರಾಟ 4ನೇ ದಿನಕ್ಕೆ: ನಾಳೆ ಮಧ್ಯಾಹ್ನ 3 ಗಂಟೆಯವರೆಗೆ ಸರ್ಕಾರಕ್ಕೆ ಡೆಡ್‌ಲೈನ್!

October 28, 2026
ಆಟೋ ಪ್ರಯಾಣಿಕರಿಗೆ ಬೆಲೆ ಏರಿಕೆ ಬಿಸಿ: 13 ವರ್ಷಗಳ ಬಳಿಕ ದರ ಪರಿಷ್ಕರಿಸಿದ ತಮಿಳುನಾಡು ಸರ್ಕಾರ

ಆಟೋ ಪ್ರಯಾಣಿಕರಿಗೆ ಬೆಲೆ ಏರಿಕೆ ಬಿಸಿ: 13 ವರ್ಷಗಳ ಬಳಿಕ ದರ ಪರಿಷ್ಕರಿಸಿದ ತಮಿಳುನಾಡು ಸರ್ಕಾರ

October 28, 2026

Recent News

We bring you the best Premium WordPress Themes that perfect for news, magazine, personal blog, etc. Check our landing page for details.

Browse by Category

Recent News

ಯುವಕರಲ್ಲೂ ಹೆಚ್ಚುತ್ತಿದೆ ಸ್ಟ್ರೋಕ್ ಅಪಾಯ: ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

ಯುವಕರಲ್ಲೂ ಹೆಚ್ಚುತ್ತಿದೆ ಸ್ಟ್ರೋಕ್ ಅಪಾಯ: ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ!

October 28, 2026
ಚಂದನ್ ಶೆಟ್ಟಿ ‘ಮೈಮಾಟ’ ಹಾಡಿನ ವಿವಾದಕ್ಕೆ ಸ್ಪಷ್ಟನೆ: ವೈಯಕ್ತಿಕ ಜೀವನಕ್ಕೆ ಲಿಂಕ್ ಮಾಡಬೇಡಿ ಎಂದ ಗಾಯಕ

ಚಂದನ್ ಶೆಟ್ಟಿ ‘ಮೈಮಾಟ’ ಹಾಡಿನ ವಿವಾದಕ್ಕೆ ಸ್ಪಷ್ಟನೆ: ವೈಯಕ್ತಿಕ ಜೀವನಕ್ಕೆ ಲಿಂಕ್ ಮಾಡಬೇಡಿ ಎಂದ ಗಾಯಕ

October 28, 2026
  • About
  • Advertise
  • Privacy & Policy
  • Contact

Vijaya Sakshi 2026 CREATED BY Kalahamsa Infotech. PREMIUM WEBSITE SOLUTIONS.

error: Content is protected !!
Join WhatsApp ▤ Read E-Paper