ಕೋಲಾರ: ಅಪರಾಧ ಮಾಡಿದವರನ್ನು ಬಿಡುಗಡೆ ಮಾಡುವ ಯೋಚನೆ ಸರ್ಕಾರಕ್ಕಿಲ್ಲ ಎಂದು ಆಹಾರ ಸಚಿವ ಕೆಎಚ್ ಮುನಿಯಪ್ಪ ಹೇಳಿದರು. ಕೋಲಾರದಲ್ಲಿ ಮಾತನಾಡಿದ ಅವರು, ದೊಂಬಿ ಗಲಭೆಗಳಲ್ಲಿ ಸಂಬಂಧವಿಲ್ಲದವರು ಸೇರಿರುತ್ತಾರೆ.
Advertisement
ನೇರವಾಗಿ ಅಪರಾಧ ಮಾಡಿದವರನ್ನು ಬಿಡುಗಡೆ ಮಾಡುವ ಯೋಚನೆ ಸರ್ಕಾರಕ್ಕಿಲ್ಲ ಎಂದರು. ಇದೇ ವೇಳೆ ‘ನಾಗಮಂಗಲ ಪ್ರಕರಣದಲ್ಲೂ ಹೀಗೆ ಆಗಲಿದೆಯೇ?’ ಎಂಬ ಮಾಧ್ಯಮದವರ ಪ್ರಶ್ನೆಗೆ, ‘ಪೊಲೀಸರ ತನಿಖಾ ವರದಿ ಆಧರಿಸಿ ಮುಂದಿನ ಕ್ರಮ ಆಗಲಿದೆ ಎಂದರು.
ಇಂದು ಬಂದಿರುವ ಪತ್ರಿಕೆಗಳಲ್ಲಿ ಸರ್ಕಾರದ ಜಾಹೀರಾತು ವಿವಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುವುದು ಚಾಮುಂಡೇಶ್ವರಿ ಹೇಳಿರುವುದು ತಾನೆ? ಸರ್ಕಾರವೂ ಅದನ್ನೆ ಹೇಳಿದೆ, ವಿಪಕ್ಷ ಎಂದು ಏನೂ ಹೇಳಿಲ್ಲ. ಸಮಾಜಕ್ಕೆ ಕೆಟ್ಟದನ್ನ ಬಯಸುವರ ವಿರುದ್ದವೇ ಆ ಜಾಹೀರಾತು ಇದೆ. ಪಕ್ಷವನ್ನು ಹೆಸರಿಸಿಲ್ಲ ಎಂದರು.