ಕಲಬುರಗಿ: ಕಲಬುರಗಿಯಲ್ಲಿ ನಡೆದ KEA ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯಲ್ಲಿ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಪ್ರತಿಕ್ರಿಯೇ ನೀಡಿದ್ದಾರೆ. ಪರೀಕ್ಷಾ ಅಕ್ರಮದಲ್ಲಿ ಡೀಲ್ ಆಗಿ ಸರ್ಕಾರಕ್ಕೂಪಾಲು ಹೋಗಿದೆ. ಯಾರ್ಯಾರಿಗೆ ಎಷ್ಪೆಷ್ಟು ಪಾಲು ಹೋಗಿದೆ ಎಲ್ಲ ವಿಚಾರಕ್ಕೂ ತನಿಖೆ ಆಗ್ಲಿಬೇಕು ಆಗ ಸತ್ಯಾಂಶ ಹೊರಗೆ ಬರುತ್ತದೆ ಎಂದರು.
ಇನ್ನೂ ಹಿಂದಿನ ಸರ್ಕಾರದ ಬಗ್ಗೆ ಆರೋಪ ಮಾಡಿದ ನೀವು ಈಗ್ಯಾಕೆ ಮೌನವಾಗಿದ್ದಿರಾ.? ಆಡಳಿತ ಸರಿಪಡಿಸೋದು ಅಂದ್ರೆ ಈ ರೀತಿ ಅಕ್ರಮ ಮಾಡೋದಾ? ಪ್ರಕರಣದ ಕಿಂಗ್ ಪಿನ್ ಬಂಧಿಸಿ ಮಂಪರು ಪರೀಕ್ಷೆ ಮಾಡಿ ಗೊತ್ತಾಗುತ್ತೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದರು.



