ಗೋಲ್ಡ್‌ ಪ್ರಿಯರಿಗೆ ಬಿಗ್‌ ಶಾಕ್! ದೀಪಾವಳಿಯಂದೇ‌ ಏರಿಕೆ ಕಂಡ ಚಿನ್ನದ ಬೆಲೆ – ಹೀಗಿದೆ ಇಂದಿನ ರೇಟ್

0
Spread the love

ಬೆಲೆ ಏರಲಿ, ಇಳಿಯಲಿ.. ಅದಕ್ಕಿರುವ ಡಿಮ್ಯಾಂಡ್‌ ಮಾತ್ರ ಕಮ್ಮಿ ಆಗಲ್ಲ. ರೇಟ್‌ ಎಷ್ಟಿದ್ದರೂ ಚಿನ್ನದ ಬೇಡಿಕೆ ಕಮ್ಮಿ ಆಗುತ್ತಿಲ್ಲ. ಚಿನ್ನವನ್ನು ಬಿಸ್ಕತ್, ಗಟ್ಟಿ ಬಂಗಾರ ಇಲ್ಲವೇ ಆಭರಣಗಳ ರೂಪದಲ್ಲಿ ಸಾಮಾನ್ಯವಾಗಿ ಕೊಳ್ಳಲಾಗುತ್ತದೆ. ಚಿನ್ನವನ್ನು ಸಾಮಾನ್ಯವಾಗಿ ಪ್ರತಿಯೊಬ್ಬರು ಕೊಳ್ಳಲು ಬಯಸುತ್ತಾರೆ, ತಲೆದೋರುವ ಕಷ್ಟದ ಸಂದರ್ಭಗಳಲ್ಲಿ ಚಿನ್ನವು ಆಪದ್ಭಾಂಧವನಂತೆ ಸಹಾಯಕ್ಕೆ ಬರುತ್ತದ ಎಂದು ಇದರ ಖರೀದಿ ಕೂಡ ಹೆಚ್ಚು.

Advertisement

ಬೆಂಗಳೂರಿನಲ್ಲಿ 24 ಕ್ಯಾರೆಟ್‌ ಶುದ್ಧ ಚಿನ್ನದ ದರ 10 ಗ್ರಾಮ್‌ಗೆ 2,080 ರೂ. ಏರಿಕೆ ಕಂಡಿದ್ದು 1,32,770 ರೂ.ಗೆ ಜಿಗಿದಿದೆ. 1 ಗ್ರಾಮ್‌ ಚಿನ್ನದ ದರ 13,277 ರೂ. ಇದೆ.

ಇನ್ನು 10 ಗ್ರಾಮ್‌ 22 ಕ್ಯಾರೆಟ್‌ ಆಭರಣ ಚಿನ್ನದ ದರ 1,21,700 ರೂ.ಗೆ ತಲುಪಿದೆ. 1 ಗ್ರಾಮ್‌ ಚಿನ್ನದ 12,170 ರೂ. ಇದೆ. ಆಭರಣ ಚಿನ್ನದ ದರದಲ್ಲಿ ಒಂದೇ ದಿನ 10 ಗ್ರಾಮ್‌ಗೆ 1,900 ರೂ. ಏರಿಕೆಯಾಗಿದೆ.

ಆದರೆ, ಇದೇ ವೇಳೆ ಬೆಳ್ಳಿ ದರದಲ್ಲಿ ಇಳಿಕೆ ದಾಖಲಾಗಿದೆ. ಬಡವರ ಬಂಗಾರದ ದರ ಸತತ ಐದನೇ ದಿನವೂ ಇಳಿಕೆ ಕಂಡಿದ್ದು, ಕೆಜಿಗೆ 1,78,000 ರೂ.ಗೆ ಮುಟ್ಟಿದೆ. ಮಂಗಳವಾರ ಒಂದೇ ದಿನ 1,900 ರೂ. ಕುಸಿತ ಕಂಡಿದೆ.


Spread the love

LEAVE A REPLY

Please enter your comment!
Please enter your name here