HomeGadag Newsಜಗತ್ತಿನ ಶ್ರೇಷ್ಠ ಗುರು ತಾಯಿ : ಶ್ರೀ ಡಾ. ಕಲ್ಲಯ್ಯಜ್ಜನವರು

ಜಗತ್ತಿನ ಶ್ರೇಷ್ಠ ಗುರು ತಾಯಿ : ಶ್ರೀ ಡಾ. ಕಲ್ಲಯ್ಯಜ್ಜನವರು

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಸಂಸ್ಕಾರ, ಸಂಸ್ಕೃತಿ ಮುಖ್ಯವಾಗಿ ಮನುಕುಲಕ್ಕೆ ಬೇಕು. ಮನ ಗೆದ್ದು ಮಾರು ಗೆಲ್ಲು ಎಂದು ಹೇಳುವ ಹಾಗೆ ಅಕ್ಕಂದಿರೆಲ್ಲ ಸೇರಿ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಪ್ರಶಂಸನೀಯ. ಜನ್ಮ ಕೊಟ್ಟ ತಾಯಿ, ವಿದ್ಯೆ ಕೊಟ್ಟ ಗುರು, ಭೂಮಿ ತಾಯಿ ಈ ಮೂವರ ಋಣವನ್ನು ತೀರಿಸಲು ಸಾಧ್ಯವಿಲ್ಲ. ಜಗತ್ತಿನಲ್ಲಿ ಅತಿ ದೊಡ್ಡ ಗುರು ಎಂದರೆ ತಾಯಿ, ಮಕ್ಕಳಿಗೆ ಒಳ್ಳೆಯ ನಡೆ-ನುಡಿ, ಆಚಾರ, ಸಂಸ್ಕೃತಿ, ಸಂಸ್ಕಾರಗಳನ್ನು ನೀಡಬೇಕು ಎಂದು ಪರಮಪೂಜ್ಯ ಶ್ರೀ ಡಾ. ಕಲ್ಲಯ್ಯಜ್ಜನವರು ನುಡಿದರು.

ಅಕ್ಕನ ಬಳಗದಲ್ಲಿ ನಡೆದ ಗುರುವಂದನಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಅಕ್ಕನ ಬಳಗದ ಸದಸ್ಯೆ ಶಿವಲೀಲಾ ಹಿರೇಮಠ ಹಾಗೂ ಅವರ ಸಹೋದರ ಚನ್ನಬಸವರಾಜು ಹಿರೇಮಠ ತಮ್ಮ ಸಹೋದರಿ ಲಿಂ. ಉಮಾದೇವಿ ತಾಳಿಕೋಟಿಮಠ ಹಾಗೂ ಲಿಂ. ಪಂಚಾಕ್ಷರಯ್ಯ ಹಿರೇಮಠ ದಂಪತಿಗಳ ಸ್ಮರಣಾರ್ಥ ಭಾವಚಿತ್ರ ಅನಾವರಣ ಮಾಡಿದರು.

ಬಳಗದ ಅಧ್ಯಕ್ಷೆ ಲಲಿತಾ ವಿ.ಬಾಳಿಹಳ್ಳಿಮಠ ಸ್ವಾಗತಿಸಿದರು. ಶಾರದಾ ಹಿರೇಮಠ ಪ್ರಾರ್ಥಿಸಿದರು. ವೇದಿಕೆ ಮೇಲೆ ಟ್ರಸ್ಟಿಗಳಾದ ಶಾಂತ. ಬಿ.ಸಂಕನೂರ, ಕೋಶಾಧ್ಯಕ್ಷರಾದ ಜಯಲಕ್ಷ್ಮಿ ಬಳ್ಳಾರಿ ಉಪಸ್ಥಿತರಿದ್ದರು. ಪವಿತ್ರಾ ಬಿರಾದಾರ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ರೇಣುಕಾ ಅಮಾತ್ಯ ವಂದಿಸಿದರು.

ಕಾರ್ಯಕ್ರಮದಲ್ಲಿ ನಾಗರತ್ನಾ ಹುಬಳಿಮಠ, ಕಸ್ತೂರಿ ಹಿರೇಗೌಡರ, ಮೀನಾಕ್ಷಿ ಸಜ್ಜನರ, ಶೈಲಜಾ ಕವಲೂರ, ರೇಖಾ ಶಿಗ್ಲಿಮಠ, ಶಾಂತ ಗೌಡರ, ಶಕುಂತಲಾ ಮಠದ, ಜಯಶ್ರೀ ಬಾಳಿಹಳ್ಳಿಮಠ, ಸುವರ್ಣಾ ಮದರಿಮಠ, ಮಂಜುಳಾ ಹಿರೇಮಠ, ಪುಷ್ಪಾ ಬಳ್ಳಾರಿ, ಪುಷ್ಪಾ ಹಿರೇಮಠ, ಜಯಲಕ್ಷ್ಮಿ ಗುಗ್ಗರಿ, ಸುವರ್ಣಾ ಹೊಸಂಗಡಿ, ಶಾರದಾ ಬೊಮ್ಮಸಾಗರ, ಶಶಿಕಲಾ ಹಿರೇಮಠ, ದೀಪಾ ಪಟ್ಟಣಶೆಟ್ಟಿ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img