Bigg Boss ಮನೆಗೆ ಬಂದ ಹನುಮಂತನ ಪೋಷಕರು! ಮಗನಿಗಾಗಿ ತಂದರು ಊಟದ ಬುತ್ತಿ

0
Spread the love

ಬಿಗ್ ಬಾಸ್ ಕನ್ನಡ ಸೀಸನ್ 11ನೇ ಸೀಸನ್​ ಈಗಾಗಲೇ ಮೂರು ತಿಂಗಳು ಪೂರ್ಣಗೊಳಿಸಿದೆ. ಸದ್ಯ ದೊಡ್ಮನೆಯಲ್ಲಿ 9 ಮಂದಿ ಇದ್ದು, ಈ ಪೈಕಿ ಒಬ್ಬರು ಈ ವಾರ ಹೊರ ಹೋಗಲಿದ್ದಾರೆ. ಈ ಮೂಲಕ ಸ್ಪರ್ಧಿಗಳ ಸಂಖ್ಯೆ 8ಕ್ಕೆ ಇಳಿಕೆ ಆಗಲಿದೆ. ಇನ್ನೂ ಈ ವಾರ ಬಿಗ್​ಬಾಸ್​ ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಒಬ್ಬೊಬ್ಬರೇ ಬಂದು ಹೋಗ್ತಿದ್ದಾರೆ.

Advertisement

ಅಂತೆಯೇ ಧನರಾಜ್ ಅವರ ದೊಡ್ಡ ಕುಟುಂಬ ಬಿಗ್​ಬಾಸ್ ಮನೆಗೆ ಎಂಟ್ರಿಯಾಗಿತ್ತು. ಇದೀಗ ಬಿಗ್​ಬಾಸ್ ಮನೆಗೆ ಹನುಮಂತನ ಮನೆಯವರು ಆಗಮಿಸಿದ್ದಾರೆ. ಹನುಮಂತನ ಪೋಷಕರು ಮಗನಿಗಾಗಿ ಬುತ್ತಿ ಕಟ್ಟಿಕೊಂಡು ಮನೆಗೆ ಬಂದಿದ್ದಾರೆ.

ಬಿಗ್​ಬಾಸ್​ ಮನೆಗೆ ಮಗನಿಗಾಗಿ ಬುತ್ತಿ ತೆಗೆದುಕೊಂಡು ಬಂದಿದ್ದಾರೆ ಹನುಮಂತನ ತಂದೆ ತಾಯಿ. ಮನೆಯ ಒಳಗೆ ಬರುತ್ತಿದ್ದಂತೆ ಮಗನನ್ನೂ ನೋಡಿ ಪೋಷಕರು ಭಾವುಕರಾಗಿದ್ದಾರೆ. ಅಪ್ಪಿಕೊಂಡು ಹನುಮಂತನಿಗೆ ಮುತ್ತು ಕೊಟ್ಟಿದ್ದಾರೆ. ಇದಾದ ಬಳಿಕ ತಾವು ತಂದಿದ್ದ ಊಟದ ಬುತ್ತಿಯನ್ನು ತೆಗೆದು ಎಲ್ಲರ ಜೊತೆಗೆ ಕುಳಿತುಕೊಂಡು ಉತ್ತರ ಕರ್ನಾಟಕದ ಫೇಮಸ್​ ರೊಟ್ಟಿ, ಮೂರು ತರಹದ ಪಲ್ಯವನ್ನು ತಿಂದಿದ್ದಾರೆ.

ಬಿಗ್​ಬಾಸ್ ಸೀಸನ್ 11 ಆರಂಭವಾದಾಗ ಪ್ರತಿದಿನ ಜಗಳಗಳೇ ತುಂಬಿರುತ್ತಿದ್ದವು. ಲಾಯರ್ ಜಗದೀಶ್ ಇನ್ನೂ ಕೆಲವರು ಇದ್ದಾಗಂತೂ ಬರೀ ಜಗಳವೇ ತುಂಬಿರುತ್ತಿತ್ತು. ಆದರೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ಹನುಮಂತ ಬಿಗ್​ಬಾಸ್ ಮನೆಯ ವಾತಾವರಣವನ್ನೇ ಬದಲಾಯಿಸಿಬಿಟ್ಟಿದ್ದ. ಹನುಮಂತ, ಮನೆಗೆ ಆರಂಭದಲ್ಲಿ ತನ್ನ ಅಮಾಯಕತೆ, ಪ್ರತಿಭೆಯಿಂದ ಪ್ರೇಕ್ಷಕರನ್ನು ಮತ್ತು ಮನೆ ಸದಸ್ಯರನ್ನು ಸೆಳೆದಿದ್ದನು.


Spread the love

LEAVE A REPLY

Please enter your comment!
Please enter your name here