Home Bengaluru News ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ಕಿರುಕುಳ: ನಮ್ಮ ಮೆಟ್ರೋದಲ್ಲಿ ದುರ್ವರ್ತನೆ ತೋರಿದ ವ್ಯಕ್ತಿ ವಿರುದ್ಧ NCR ದಾಖಲು!

ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ಕಿರುಕುಳ: ನಮ್ಮ ಮೆಟ್ರೋದಲ್ಲಿ ದುರ್ವರ್ತನೆ ತೋರಿದ ವ್ಯಕ್ತಿ ವಿರುದ್ಧ NCR ದಾಖಲು!

0
ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ಕಿರುಕುಳ: ನಮ್ಮ ಮೆಟ್ರೋದಲ್ಲಿ ದುರ್ವರ್ತನೆ ತೋರಿದ ವ್ಯಕ್ತಿ ವಿರುದ್ಧ NCR ದಾಖಲು!
Spread the love

ಬೆಂಗಳೂರು:- ಕಾಮುಕನೊಬ್ಬ ಯುವತಿಯ ಜೊತೆ ಅಸಭ್ಯವಾಗಿ ವರ್ತಿಸಿ, ಖಾಸಗಿ ಅಂಗಾಗ ಮುಟ್ಟಿ ಕಿರುಕುಳ ನೀಡಿರುವ ಘಟನೆ ಮೆಜಸ್ಟಿಕ್‌ನ ನಮ್ಮ ಮೆಟ್ರೋ ನಿಲ್ದಾಣದಲ್ಲಿ ಜರುಗಿದೆ.

ಸಂತ್ರಸ್ತೆ ಯುವತಿ ಮೆಟ್ರೋದಲ್ಲಿ ವಿಧಾನಸೌಧದಿಂದ ಸಂಚರಿಸುತ್ತಿದ್ದ ವೇಳೆ ಅಲ್ಲಿಯೇ ಇದ್ದ ವ್ಯಕ್ತಿಯೊಬ್ಬ ಯುವತಿಯ ಖಾಸಗಿ ಅಂಗ ಸ್ಪರ್ಶಿಸಿದ್ದಾನೆ. ಇಷ್ಟೇ ಅಲ್ಲದೇ ಏನೂ ತಿಳಿದೇ ಇಲ್ಲ ಎನ್ನುವಂತೆ ಆಕೆಯ ಮುಂದೆಯೇ ನಿಂತು ಕೆಟ್ಟದಾಗಿ ನಗುವ ಕೆಲಸ ಮಾಡಿದ್ದಾನೆ ಎನ್ನಲಾಗಿದೆ.

ರೈಲು ಕೆಂಪೇಗೌಡ ನಿಲ್ದಾಣಕ್ಕೆ ತಲುಪಿದಾಗ ಯುವತಿಯು ಮುತ್ತಪ್ಪನ ಅಸಭ್ಯ ವರ್ತನೆ ಬಗ್ಗೆ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ. ಮೆಟ್ರೋ ಭದ್ರತಾ ಸಿಬ್ಬಂದಿ ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದು ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ನಂತರ ಯುವತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಅಸಭ್ಯ ವರ್ತನೆ ಅಡಿಯಲ್ಲಿ ಎನ್‌ಸಿಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


Spread the love

LEAVE A REPLY

Please enter your comment!
Please enter your name here