ವಿಜಯಸಾಕ್ಷಿ ಸುದ್ದಿ, ಗದಗ: ತಾಲೂಕಿನ ಅಸುಂಡಿ ಗ್ರಾಮದಲ್ಲಿ ಸಮಸ್ತ ಮುಸ್ಲಿಂ ಬಾಂಧವರ ಸಮ್ಮುಖದಲ್ಲಿ ನೂತನ ಅಂಜುಮನ್ ಕಮಿಟಿ ಹಾಗೂ ಅಬ್ದುಲ್ ಕಲಾಂ ಶಾದಿ ಮಹಲ್ ಕಮಿಟಿಯ ಪದಾಧಿಕಾರಿಗಳನ್ನು ಒಮ್ಮತದಿಂದ ಆಯ್ಕೆ ಮಾಡಲಾಯಿತು.
ಗ್ರಾಮದಲ್ಲಿ ನಡೆದ ಸಭೆಯಲ್ಲಿ ಮಲ್ಲಸಮುದ್ರ ಗ್ರಾಮದ ಮುಫ್ತಿ ಅಬ್ದುಲ್ ಸಮದ ಅ. ಜಕಾತಿ ಅವರ ಉಪಸ್ಥಿತಿಯಲ್ಲಿ ಪಂಚರು ಹಾಗೂ ಗ್ರಾಮಸ್ಥರು ಸೇರಿಕೊಂಡು ಕಮಿಟಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು.
ನೂತನ ಕಮಿಟಿಯ ಅಧ್ಯಕ್ಷರಾಗಿ ಹಸನಸಾಬ ತಾ. ಓಲೇಕಾರ ಆಯ್ಕೆಯಾಗಿದ್ದು, ಉಪಾಧ್ಯಕ್ಷರಾಗಿ ಕಾಸೀಮಸಾಬ ಹು. ಭಾವಿಕಟ್ಟಿ, ಗೌರವಾಧ್ಯಕ್ಷರಾಗಿ ಬಾಬುಸಾಬ ನದಾಫ್, ಕಾರ್ಯದರ್ಶಿಯಾಗಿ ಅಲ್ಲಾಭಕ್ಷಿ ಮಾ. ನದಾಫ್ ಹಾಗೂ ಖಜಾಂಚಿಯಾಗಿ ರಾಜೇಸಾಬ ದಾ. ಬೆಳ್ಳಿಕೊಪ್ಪ ಆಯ್ಕೆಯಾದರು.
ಸದಸ್ಯರಾಗಿ ಯತೀಮಸಾಬ ಗುಳಗುಂದಿ, ಹುಜೇಫಾ ಡಾಲಾಯತ, ರಫೀಕ್ ಅ. ನದಾಫ್, ಯಾಸೀನ್ ನ. ಭಾವಿಕಟ್ಟಿ, ರಫೀಕ್ ಶ. ಬಿಂಕದಕಟ್ಟಿ, ಇಸ್ಮಾಯಿಲ್ ಧಾರವಾಡ ಹಾಗೂ ಮಾಬುಸಾಬ ಹು. ಕಾಗದಗಾರ ಅವರನ್ನು ನೇಮಕ ಮಾಡಲಾಯಿತು.
ಸಭೆಯಲ್ಲಿ ಗ್ರಾಮಾಭಿವೃದ್ಧಿ, ಸಮುದಾಯದ ಏಕತೆ ಹಾಗೂ ಶಾದಿ ಮಹಲ್ನ ಅಭಿವೃದ್ಧಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಯಿತು. ನೂತನ ಪದಾಧಿಕಾರಿಗಳು ಸಮಾಜದ ಅಭಿವೃದ್ಧಿಗಾಗಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವ ಭರವಸೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಬುಸಾಬ ಅ. ಡಾಲಾಯತ, ದೂದುಸಾಬ ಮ. ಜಮಾಲಖಾನವರ, ಹಸನಸಾಬ ರಾ. ನದಾಫ, ಗಫಾರಸಾಬ ರಾ. ಬೆಂತೂರ, ರಫೀಕ್ ಬುರಬುರೆ, ಬಬಲಿಸಾಬ ಕೊತಬಾಳ, ಶರೀಫಸಾಬ ಬಿಂಕದಕಟ್ಟಿ, ಮಕ್ತುಮಸಾಬ ಓಲೇಕಾರ, ತಾಜುದ್ದೀನ್ ಓಲೇಕಾರ, ಯೂಸುಫಸಾಬ ಧಾರವಾಡ, ಮಕ್ಬೂಲ್ ಗುಳಗುಂದಿ, ರಿಯಾಜ್ ಮುಲ್ಲಾನವರ ಸೇರಿದಂತೆ ಗ್ರಾಮದ ಹಿರಿಯರು ಹಾಗೂ ಯುವಕರು ಉಪಸ್ಥಿತರಿದ್ದರು.



