ಬೆಂಗಳೂರು: ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಜುಲೈ 14ರವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಇದರ ಜೊತೆಗೆ ರಾಜ್ಯದ ಬಹುತೆಕ ಜಿಲ್ಲೆಗಳಾದ ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ವಿಜಯಪುರ, ಯಾದಗಿರಿ, ರಾಯಚೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಸೇರಿ 20ಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ.
ಈ ಪ್ರದೇಶಗಳಲ್ಲಿ ಮಳೆ ದಾಖಲಾಗಿದ್ದು: ಕ್ಯಾಸಲ್ರಾಕ್, ಮಂಕಿ, ಭಾಗಮಂಡಲ, ಶೃಂಗೇರಿ, ಸುಳ್ಯ, ಕಾರ್ಕಳ, ಬಂಟ್ವಾಳ, ಪುತ್ತೂರು, ಯಲ್ಲಾಪುರ, ಕೊಪ್ಪ, ಗೋಕರ್ಣ, ಧರ್ಮಸ್ಥಳ, ಬಂಡೀಪುರ, ಬಾಳೆಹೊನ್ನೂರು, ನಾಪೋಕ್ಲು, ಮಾಣಿ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ.
ಬೆಂಗಳೂರು ನಗರದ ತಾಪಮಾನ ಈ ರೀತಿ ದಾಖಲಾಗಿದೆ:
ಎಚ್‌ಎಎಲ್: ಗರಿಷ್ಠ – 27.5°C, ಕನಿಷ್ಠ – 20.0°C
ನಗರ: ಗರಿಷ್ಠ – 26.6°C, ಕನಿಷ್ಠ – 20.6°C
ಕೆಐಎಎಲ್: ಗರಿಷ್ಠ – 28.6°C, ಕನಿಷ್ಠ – 20.3°C
ಜಿಕೆವಿಕೆ: ಗರಿಷ್ಠ – 27.0°C, ಕನಿಷ್ಠ – 20.2°C
ಬೆಂಗಳೂರು ಸೇರಿದಂತೆ ಹಲವು ಭಾಗಗಳಲ್ಲಿ ಮೋಡಕವಿದ ವಾತಾವರಣವಿದ್ದು, ಮಳೆ ಮುಂದುವರಿಯುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಮುಂಜಾಗೃತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಗೆ ಸೂಚನೆ ನೀಡಿದೆ.