ಬೆಂಗಳೂರು: ರಾಜ್ಯದ ಜನತೆಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟುವ ಸಾಧ್ಯತೆ ಇದ್ದು, ನಂದಿನಿ ಹಾಲಿನ ದರ ಹೆಚ್ಚಳದ ಬಗ್ಗೆ ಚರ್ಚೆ ನಡೆದಿದೆ.
ಪ್ರತಿ ಲೀಟರ್ ಹಾಲಿನ ದರದಲ್ಲಿ 4 ರಿಂದ 5ರವರೆಗೆ ಹೆಚ್ಚಳವಾಗುವ ಸಾಧ್ಯತೆ ಇದೆ.
ಬೆಂಗಳೂರಿನ ಕರ್ನಾಟಕ ಹಾಲು ಮಹಾಮಂಡಳ (KMF) ಕಚೇರಿಯಲ್ಲಿ ಇಂದು ಸರ್ವಸದಸ್ಯರ ಸಭೆ ನಡೆಯಿತು. ಸಭೆಯಲ್ಲಿ ರಾಜ್ಯದ 16 ಜಿಲ್ಲಾ ಹಾಲು ಒಕ್ಕೂಟಗಳ ಪ್ರಮುಖರು ಭಾಗವಹಿಸಿದ್ದರು.
ಹೈನುಗಾರರ ಹಿತದೃಷ್ಟಿಯಿಂದ ಪ್ರತಿ ಲೀಟರ್ ಹಾಲಿಗೆ ಕನಿಷ್ಠ 10 ರೂ. ಹೆಚ್ಚಳ ಮಾಡುವಂತೆ ಹಾಲು ಒಕ್ಕೂಟಗಳು ಪ್ರಬಲ ಬೇಡಿಕೆ ಮಂಡಿಸಿವೆ. ಹಾಲು ಉತ್ಪಾದನಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಹೆಚ್ಚಿನ ದರ ನೀಡುವ ಅಗತ್ಯವಿದೆ ಎಂದು ಒಕ್ಕೂಟಗಳ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ.
ಒಕ್ಕೂಟಗಳ ಬೇಡಿಕೆಯನ್ನು ಸರ್ಕಾರದ ಗಮನಕ್ಕೆ ತರಲಾಗಿದ್ದು, ಮುಖ್ಯಮಂತ್ರಿ ಅವರ ಅನುಮೋದನೆ ಬಳಿಕವೇ ಅಂತಿಮ ದರ ನಿಗದಿಯಾಗಲಿದೆ. ಹೀಗಾಗಿ ತಿಂಗಳಾಂತ್ಯದಲ್ಲಿ ನಂದಿನಿ ಹಾಲಿನ ದರ ಪರಿಷ್ಕರಣೆಯಾಗುವ ಸಾಧ್ಯತೆ ಇದೆ.
ಸಂಭಾವ್ಯ ಪರಿಷ್ಕೃತ ದರ:
| ಹಾಲಿನ ವಿಧ | ಪ್ರಸ್ತುತ ದರ | ಸಂಭಾವ್ಯ ದರ |
|---|---|---|
| ಟೋನ್ಡ್ ಹಾಲು | ₹46 | ₹50 |
| ಶುಭಂ ಹಾಲು | ₹52 | ₹56 |
| ಸಮೃದ್ಧಿ ಹಾಲು | ₹55 | ₹59 |
| ಸ್ಪೆಷಲ್ ಹಾಲು | ₹52 | ₹56 |
| ಡಬಲ್ ಟೋನ್ಡ್ ಹಾಲು | ₹43 | ₹47 |
| ಆರೆಂಜ್ ಹಾಲು | ₹50 | ₹54 |
| ಗ್ರೀನ್ ಸ್ಪೆಷಲ್ ಹಾಲು | ₹50 | ₹54 |



