ಬೆಂಗಳೂರು: ಸಂಸತ್ ಮೇಲಿನ ದಾಳಿ ಬಗ್ಗೆ ಚರ್ಚೆ ಬೇಡ ಅಂದರೆ ಹೇಗೆ? ಬಿಜೆಪಿಯವರು ಸರ್ವಾಧಿಕಾರಿ ಧೋರಣೆ ಮಾಡುತ್ತಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಸಂಸತ್‌ನಲ್ಲಿ ವಿಪಕ್ಷ ಸಂಸದರ ಅಮಾನತು ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಗೆ ಅಧಿಕಾರದ ಮದ ನೆತ್ತಿಗೆರಿದೆ. 3 ರಾಜ್ಯ ಹೇಗೋ ಮಾಡಿ ಗೆದ್ದಿದ್ದೇವೆ ಎಂದು ಹೀಗೆ ಮಾಡುತ್ತಿದ್ದಾರೆ.
ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ. ಇದನ್ನು ಎಲ್ಲರೂ ಖಂಡಿಸಬೇಕು ಎಂದರು. ಸಂಸತ್ ಮೇಲಿನ ದಾಳಿ ಬಗ್ಗೆ ಚರ್ಚೆ ಬೇಡ ಅಂದರೆ ಹೇಗೆ? ಬಿಜೆಪಿಯವರು ಸರ್ವಾಧಿಕಾರಿ ಧೋರಣೆ ಮಾಡುತ್ತಿದ್ದಾರೆ. ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಅಂದುಕೊಂಡು ಹೀಗೆ ಮಾಡುತ್ತಿದ್ದಾರೆ. ಮೋದಿ, ಅಮಿತ್ ಶಾ ಅಧಿವೇಶನಕ್ಕೆ ಬರಲ್ಲ.
ಹಾಗಾದರೆ ಅಧಿವೇಶನ ಯಾಕೆ ನಡೆಯಬೇಕು? ಕಾಂಗ್ರೆಸ್ ಅವರು ಹಿಂದೆ ಮಾಡಿದ್ರು ನಾವೂ ಮಾಡ್ತೀವಿ ಅಂದರೆ ಹೇಗೆ? ಅದನ್ನು ಅವರು ಜನರ ಮುಂದೆ ಹೇಳಲಿ.
ಬಿಜೆಪಿಯವರು ದೇಶವನ್ನು ಹಾಗೆ ಮಾಡ್ತೀವಿ, ಹೀಗೆ ಮಾಡ್ತೀವಿ ಅಂದರು. ಆದರೆ ಅವರು ಹೇಳಿದ್ದು ಏನೂ ಮಾಡಿಲ್ಲ. ಇದಕ್ಕೆ ಬಿಜೆಪಿ ಅವರು ಉತ್ತರ ಕೊಡಬೇಕು ಎಂದು ವಾಗ್ದಾಳಿ ನಡೆಸಿದರು.