ಪತ್ನಿ ಜತೆಗಿನ ಲೈಂಗಿಕ ಕ್ರಿಯೆಯ ವಿಡಿಯೋ ಮಾಡಿ ಸ್ನೇಹಿತರಿಗೆ ಕಳುಹಿಸ್ತಿದ್ದ ಪತಿ!

0
Spread the love

ಬೆಂಗಳೂರು: ಪತ್ನಿಯೊಂದಿಗೆ ನಡೆದ ಲೈಂಗಿಕ ಕ್ರಿಯೆಯ ವಿಡಿಯೋವನ್ನು ಮಾಡಿ, ತನ್ನ ಸ್ನೇಹಿತರೊಂದಿಗೆ ಹಂಚಿಕೊಂಡಿರುವ ಪತಿ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿ ಸಯ್ಯದ್ ಇನಾಮುಲ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತ ಈಗಾಗಲೇ ಮದುವೆಯಾಗಿದ್ದರೂ ವರದಕ್ಷಿಣೆ ಪಡೆದು ಎರಡನೇ ಮದುವೆಯಾಗಿದ್ದಾನೆ ಎಂದು ತಿಳಿದುಬಂದಿದೆ.

Advertisement

ಸೈಯದ್ ತನ್ನ ಮನೆಯ ಬೆಡ್ ರೂಂನಲ್ಲಿ ಸೀಕ್ರೆಟ್ ಕ್ಯಾಮೆರಾ ಅಳವಡಿಸಿದ್ದ. ಆ ಕ್ಯಾಮೆರಾದಲ್ಲಿ ಪತ್ನಿ ಜತೆಗಿನ ಲೈಂಗಿಕ ಕ್ರಿಯೆಯ ದೃಶ್ಯಗಳನ್ನು ರೆಕಾರ್ಡ್ ಮಾಡಿದ್ದಾನೆ. ಆ ಖಾಸಗಿ ವಿಡಿಯೋಗಳನ್ನು ದುಬೈನಲ್ಲಿ ವಾಸಿಸುವ ತನ್ನ ಸ್ನೇಹಿತರಿಗೆ ಶೇರ್ ಮಾಡಿದ್ದಾನೆ ಎಂದು ದೂರಿನಲ್ಲಿ ಆಕೆ ಉಲ್ಲೇಖಿಸಿದ್ದಾಳೆ.

ಇಷ್ಟೇ ಅಲ್ಲದೇ, ಹೊರದೇಶದಲ್ಲಿರುವ ತನ್ನ ಕೆಲವು ಮಂದಿ ಸ್ನೇಹಿತರೊಂದಿಗೂ ದೈಹಿಕ ಸಂಬಂಧ ಬೆಳೆಸುವಂತೆ ಪತ್ನಿಯನ್ನು ಒತ್ತಾಯಿಸಿದ್ದಾನೆ ಎಂಬ ಗಂಭೀರ ಆರೋಪವೂ ಇದೆ. 19 ಮಂದಿ ಹೆಂಗಸರ ಜೊತೆ ಸಂಬಂಧವಿದೆ ಎಂದು ಹೆಮ್ಮೆಯಿಂದ ಹೇಳುತ್ತಾ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂಬುದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಸಂತ್ರಸ್ತೆಯ ದೂರಿನ ಆಧಾರದ ಮೇಲೆ ಪುಟ್ಟೇನ ಹಳ್ಳಿ ಪೊಲೀಸರು ಸೈಯದ್ ಇನಾಮುಲ್ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಆರೋಪಿ ಸದ್ಯ ಪರಾರಿಯಾಗಿದ್ದಾನೆ, ಆತನಿಗಾಗಿ ಹುಡುಕಾಟ ಮುಂದುವರೆದಿದೆ.


Spread the love

LEAVE A REPLY

Please enter your comment!
Please enter your name here