ಫೈಬರ್ ಹಲಗೆಗೆ ಹೆಚ್ಚಿದ ಬೇಡಿಕೆ

0
halage
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ : ಬಹುತೇಕ ಗಂಡಸರ ಹಬ್ಬವೆಂದು ಇರುವದು ಹೋಳಿ ಹಬ್ಬ.

Advertisement

ಕಾಮಣ್ಣನನ್ನು ಕೂಡ್ರಿಸಿ, ಹುಣ್ಣಿಮೆಯ ಮರುದಿನ ಅವನನ್ನು ದಹಿಸಿ, ಬಣ್ಣವೆರಚುತ್ತ, ಲಬೋ ಲಬೋ ಎಂದು ಬಾಯಿ ಬಡಿದುಕೊಳ್ಳುತ್ತ ಊರ ತುಂಬೆಲ್ಲ ಹೋಳಿಯಾಡುವ ಹಬ್ಬವೆಂದರೆ ಗಂಡಸರಿಗೆ ಅಚ್ಚುಮೆಚ್ಚು. ಬಾಯಿ ಬಡಿದುಕೊಳ್ಳುವುದರೊಂದಿಗೆ ಹಲಗೆ ಬಾರಿಸುವುದೂ ಸಹ ಈ ಹಬ್ಬದ ವಿಶೇವವಾಗಿದೆ. ಈ ಹಿಂದೆ ತೊಗಲಿನ ಹಲಗೆಗಳು ಬಳಕೆಯಲ್ಲಿದ್ದವು. ಆದರೆ ಈಗ ಫೈಬರ್ ಹಲಗೆಗಗಳ ಆರ್ಭಟ ಜೋರಾಗಿದೆ. ಜನರೂ ಸಹ ಕಾಲಕ್ಕೆ ತಕ್ಕಂತೆ ಅವುಗಳನ್ನೇ ಖರೀದಿಸಲು ಮುಂದಾಗುತ್ತಿದ್ದು, ನರೇಗಲ್ಲದಲ್ಲಿಯಂತೂ ಈ ಫೈಬರ್ ಹಲಗೆಗಳ ಮಾರಾಟ ಬಲು ಜೋರಾಗಿದೆ.

ಮಾ. 26ರಂದು ನರೇಗಲ್ಲದಲಿ ಬಣ್ಣ ಇರುವುದರಿಂದ ಎಲ್ಲೆಲ್ಲೂ ಹಲಿಗೆ ಸದ್ದು ಮಾರ್ದನಿಸುತ್ತಿದೆ. ಪಟ್ಟಣ ಸೇರಿದಂತೆ ಹಲವೆಡೆ ಹಬ್ಬದ ವಾತಾವರಣ ಕಳೆಗಟ್ಟಿದೆ. ಮನಸ್ಸಿನಲ್ಲಿ ಮೂಡುವ ಕೆಟ್ಟ ಕಾಮನೆಗಳನ್ನು ಸುಟ್ಟು ಹಾಕುವ ಪ್ರತೀಕವಾಗಿ ಆಚರಿಸುವ ಕಾಮಣ್ಣನ ಹಬ್ಬವೆಂದರೆ ಯುವಕರಿಗೆ ಅಚ್ಚುಮೆಚ್ಚು. ಪರಸ್ಪರ ಬಣ್ಣ ಎರಚುತ್ತ ಕುಣಿದಾಡಲು ಯುವಪಡೆ ಸಜ್ಜಾಗಿದೆ.

ಶಿವರಾತ್ರಿ ಮುಗಿಯುತ್ತಿದ್ದಂತೆಯೇ ಹಲಗೆ, ತಮಟೆ ಸದ್ದು ಪಟ್ಟಣದ ಪ್ರತಿಯೊಂದು ಓಣಿ, ಬೀದಿಗಳಲ್ಲಿ ಜೋರಾಗಿ ಕೇಳಿ ಬರುತ್ತಿದೆ. ಆಧುನಿಕತೆ ಪರಿಣಾಮದಿಂದ ಚರ್ಮದ ಹಲಗೆ ಕಣ್ಮರೆಯಾಗುತ್ತಿದ್ದು, ಅದರ ಜಾಗದಲ್ಲಿ ಫೈಬರ್ ಹಲಗೆಗಳು ಸದ್ದು ಮಾಡುತ್ತಿವೆ. ಗ್ರಾಮೀಣ ಭಾಗದ ಚಿಕ್ಕಮಕ್ಕಳು ಹತ್ತಾರು ಬಗೆಯಲ್ಲಿ ಹಲಗೆ ಬಾರಿಸಿ ಖುಷಿ ಪಡುತ್ತಿರುವ ದೃಶ್ಯ ಎಲ್ಲಡೆ ಕಂಡು ಬರುತ್ತಿದೆ.

ಹೋಳಿ ಹುಣ್ಣಿಮೆಯ ಪ್ರಮುಖ ಆಕರ್ಷಣೆಯೇ ಹಲಗೆ. ಶಾಲೆ ಬಿಟ್ಟ ತಕ್ಷಣ ಮಕ್ಕಳು ಗಲ್ಲಿ-ಗಲ್ಲಿಗಳಲ್ಲಿ ಹಲಗೆ ಬಾರಿಸುತ್ತ ಓಡಾಡುವುದು ಸಾಮಾನ್ಯವಾಗಿದೆ. ಜನ `ಅಯ್ಯೋ ಪಾಪ ಮಕ್ಕಳು ಇನ್ನೊಂದೆರೆಡು ದಿನ ಇದೆ ಹಬ್ಬ ಹಲಗೆ ಬಾರಿಸಲಿ ಬಿಡ್ರಿ’ ಎಂದು ಕನಿಕರ ಪಟ್ಟುಕೊಳ್ಳುತ್ತಿದ್ದಾರೆ. ಕೆಲ ಯುವಕರು ಹಲಗೆಯಲ್ಲಿ ಬಗೆ ಬಗೆಯ ಸ್ವರ ನುಡಿಸುವುದರ ಮೂಲಕ ಸಂತಸಪಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ಹೋಳಿ ಹುಣ್ಣಿಮೆ ನಿಮಿತ್ತ ಮಾರುಕಟ್ಟೆಯಲ್ಲಿ ವಿವಿಧ ತರಹದ ಬಣ್ಣಗಳು, ಪಿಚಕಾರಿ, ಹೊಸ ವಿನ್ಯಾಸ, ಗಾತ್ರದ ಹಲಗೆಗಳು, ವಿವಿಧ ಬಗೆಯ ಮುಖವಾಡಗಳು ಸಹ ಗಮನ ಸೆಳೆಯುತ್ತಿವೆ.

 

ಪ್ರತಿ ವರ್ಷಕ್ಕಿಂತ ಈ ವರ್ಷ ಫೈಬರ್ ಹಲಗಿ, ಬಣ್ಣ, ಪಿಚಕಾರಿ, ಮುಖವಾಡಗಳ ದರ ಹೆಚ್ಚಾಗಿದೆ. ಚಿಕ್ಕ ಗಾತ್ರದ ಹಲಗಿಯಿಂದ ದೊಡ್ಡ ಗಾತ್ರದ ಹಲಗಿಗೆ 150ರಿಂದ 600 ರೂಗಳವರೆಗೆ ಮಾರಾಟ ಮಾಡುತ್ತಿದ್ದೇವೆ
-ವೀರಣ್ಣ ಸುಂಕದ.
ಹಲಿಗೆ ವ್ಯಾಪಾರಸ್ಥ.


Spread the love

LEAVE A REPLY

Please enter your comment!
Please enter your name here