ಅಮಾನವೀಯ ಕೃತ್ಯ: ಸೆ*ಕ್ಸ್ ಗೆ ಒಪ್ಪದ ಪತ್ನಿಯನ್ನು ಬರ್ಬರವಾಗಿ ಕೊಲೆಗೈದ ಪತಿ

0
Spread the love

ಯಾದಗಿರಿ:- ಜಿಲ್ಲೆಯ ಸುರಪುರದ ನಗರದ ಡೊಣ್ಣಿಗೇರ ಬಡಾವಣೆಯಲ್ಲಿ ದೈಹಿಕ ಸಂಪರ್ಕಕ್ಕೆ ಒಪ್ಪದ ಕಾರಣಕ್ಕೆ ವ್ಯಕ್ತಿಯೊಬ್ಬ ಪತ್ನಿಯನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ದಾರುಣ ಘಟನೆ ಜರುಗಿದೆ.

Advertisement

ಮರೆಮ್ಮ (35) ಮೃತ ಪತ್ನಿ. ಸಂಗಪ್ಪ ಕೊಲೆ ಮಾಡಿದ ಪತಿ. ಸದ್ಯ ಘಟನಾ ಸ್ಥಳಕ್ಕೆ ಸುರಪುರ ಠಾಣೆಯ ಪೊಲೀಸರು ಭೇಟಿ ನೀಡಿ ಸ್ಥಳ ಮಹಜರು ನಡೆಸಿದ್ದು, ಪ್ರಕರಣ ದಾಖಲಿಸಿದ್ದಾರೆ. ಸಂಗಪ್ಪನನ್ನು ಬಂಧಿಸಲಾಗಿದೆ. ಗಂಡ ಹೆಂಡತಿ ಮಧ್ಯೆ ಭಾನುವಾರ ರಾತ್ರಿ ದೈಹಿಕ ಸಂಪರ್ಕ ವಿಚಾರವಾಗಿ ಜಗಳವಾಗಿತ್ತು. ಪತ್ನಿ ದೈಹಿಕ ಸಂಪರ್ಕಕ್ಕೆ ಒಪ್ಪಿರಲಿಲ್ಲ. ಈ ವೇಳೆ, ಜಗಳ ವಿಕೋಪಕ್ಕೆ ತಿರುಗಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ.

ಕೊಲೆಗಾರ ಸಂಗಪ್ಪ ಕಳೆದ ಎರಡು ದಿನಗಳ ಹಿಂದ ತನ್ನ ಊರಾದ ಕಕ್ಕೇರದಿಂದ ಸುರಪುರಕ್ಕೆ ಬಂದಿದ್ದ. ಗಂಡ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ಒಂದು ವರ್ಷದಿಂದ ಮರೆಮ್ಮ ತವರು ಮನೆಯಲ್ಲಿದ್ದರು. ಭಾನುವಾರ ಸುರಪುರಕ್ಕೆ ಬಂದ ಸಂಗಪ್ಪ ಪತ್ನಿಯನ್ನು ದೈಹಿಕ ಸಂಪರ್ಕಕ್ಕೆ ಆಗ್ರಹಿಸಿದ್ದಾನೆ. ಒಪ್ಪದೇ ಇರುವುದಕ್ಕೆ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿದ್ದಾನೆ.


Spread the love

LEAVE A REPLY

Please enter your comment!
Please enter your name here