HomeSports NewsIPL 2025: ಪಂಜಾಬ್ ಗೆ ಸೋಲಿನ ಪಂಚ್ ಕೊಟ್ಟ ಆರ್ ಸಿಬಿ: ಬೆಂಗಳೂರಿಗೆ 7 ವಿಕೆಟ್...

IPL 2025: ಪಂಜಾಬ್ ಗೆ ಸೋಲಿನ ಪಂಚ್ ಕೊಟ್ಟ ಆರ್ ಸಿಬಿ: ಬೆಂಗಳೂರಿಗೆ 7 ವಿಕೆಟ್ ಗಳ ಭರ್ಜರಿ ಜಯ!

For Dai;y Updates Join Our whatsapp Group

ಮುಲ್ಲನ್‌ಪುರದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇಂದು ನಡೆದ ಐಪಿಎಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಸುಲಭ ಗೆಲುವು ದಾಖಲಿಸಿತು.

ಈ ಮೂಲಕ ತವರಿನ ಸೋಲಿನ ಸೇಡನ್ನು ಬೆಂಗಳೂರು ತೀರಿಸಿಕೊಂಡಿತು. ಪಂದ್ಯದಲ್ಲಿ ಟಾಸ್ ಗೆದ್ದ ಬೆಂಗಳೂರು ತಂಡದ ನಾಯಕ ರಜತ್ ಪಟಿದಾರ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಬೆಂಗಳೂರು ತಂಡ 18.5 ಓವರ್‌ಗಳಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಗುರಿ ತಲುಪಿತು.

ಪಂಜಾಬ್ ಪರ, ಪ್ರಿಯಾಂಶ್ ಆರ್ಯ 22, ಪ್ರಭಸಿಮ್ರನ್ 33, ಜೋಶ್ ಇಂಗ್ಲಿಸ್ 29, ಶಶಾಂಕ್ ಸಿಂಗ್ ಔಟಾಗದೆ (31) ಮತ್ತು ಮಾರ್ಕೊ ಜಾನ್ಸೆನ್ ಔಟಾಗದೆ 25 ರನ್ ಕೊಡುಗೆಯಿಂದ 6 ವಿಕೆಟ್ ಗೆ 157 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಆರ್ ಸಿಬಿ 18.5 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿ 7 ವಿಕೆಟ್ ಗಳ ಜಯಭೇರಿ ಬಾರಿಸಿತು.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img