HomeSports News2026 ಫಿಫಾ ವಿಶ್ವಕಪ್ʼನಲ್ಲಿ ಮೆಸ್ಸಿ ಅಬ್ಬರ: ಜೋರ್ಡನ್ ವಿರುದ್ಧ ಅರ್ಜೆಂಟೀನಾಗೆ 3-1 ಅಂತರದ ಗೆಲುವು

2026 ಫಿಫಾ ವಿಶ್ವಕಪ್ʼನಲ್ಲಿ ಮೆಸ್ಸಿ ಅಬ್ಬರ: ಜೋರ್ಡನ್ ವಿರುದ್ಧ ಅರ್ಜೆಂಟೀನಾಗೆ 3-1 ಅಂತರದ ಗೆಲುವು

For Dai;y Updates Join Our whatsapp Group

2026ರ ಫಿಫಾ ವಿಶ್ವಕಪ್‌ನಲ್ಲಿ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ತಮ್ಮ ಅದ್ಭುತ ಪ್ರದರ್ಶನವನ್ನು ಮುಂದುವರಿಸಿದ್ದು, ಜೋರ್ಡಾನ್ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ಮನಮೋಹಕ ಫ್ರೀ ಕಿಕ್ ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.

ವಿಶ್ವಕಪ್‌ನ ಗ್ರೂಪ್ ಜೆ ಹಂತದ ಕೊನೆಯ ಪಂದ್ಯದಲ್ಲಿ ಅರ್ಜೆಂಟೀನಾ 3-1 ಗೋಲುಗಳಿಂದ ಜೋರ್ಡಾನ್ ತಂಡವನ್ನು ಮಣಿಸಿ ನಾಕೌಟ್ ಹಂತಕ್ಕೆ ಭರ್ಜರಿಯಾಗಿ ಪ್ರವೇಶಿಸಿದೆ.

ಪಂದ್ಯದ ಆರಂಭದಲ್ಲಿ ಜಿಯೋವಾನಿ ಲೊ ಸೆಲ್ಸೊ ಹಾಗೂ ಲೌಟಾರೊ ಮಾರ್ಟಿನೆಜ್ ತಲಾ ಒಂದು ಗೋಲು ದಾಖಲಿಸಿ ಅರ್ಜೆಂಟೀನಾಗೆ 2-1 ಮುನ್ನಡೆ ತಂದುಕೊಟ್ಟಿದ್ದರು. ಬಳಿಕ ಪಂದ್ಯದ 60ನೇ ನಿಮಿಷದಲ್ಲಿ ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಮೆಸ್ಸಿ, 80ನೇ ನಿಮಿಷದಲ್ಲಿ ಅದ್ಭುತ ಫ್ರೀ ಕಿಕ್ ಮೂಲಕ ಚೆಂಡನ್ನು ಗೋಲುಪೆಟ್ಟಿಗೆಯೊಳಗೆ ಸೇರಿಸಿ ತಂಡದ ಗೆಲುವನ್ನು ಖಚಿತಪಡಿಸಿದರು.

ಈ ಗೋಲಿನೊಂದಿಗೆ ಮೆಸ್ಸಿ ಪ್ರಸಕ್ತ ವಿಶ್ವಕಪ್‌ನಲ್ಲಿ ತಮ್ಮ ಗೋಲುಗಳ ಸಂಖ್ಯೆಯನ್ನು 6ಕ್ಕೆ ಏರಿಸಿಕೊಂಡಿದ್ದು, ಟೂರ್ನಿಯ ಗರಿಷ್ಠ ಗೋಲು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದ್ದಾರೆ. ಜೊತೆಗೆ ವಿಶ್ವಕಪ್ ಇತಿಹಾಸದಲ್ಲಿ ತಮ್ಮ ಒಟ್ಟು ಗೋಲುಗಳ ಸಂಖ್ಯೆಯನ್ನು 19ಕ್ಕೆ ಹೆಚ್ಚಿಸಿಕೊಂಡಿದ್ದಾರೆ.

ಗ್ರೂಪ್ ಹಂತವನ್ನು ಮೊದಲೇ ಗೆದ್ದಿದ್ದ ಕಾರಣ, ಹಿಂದಿನ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಪ್ರಮುಖ ಆಟಗಾರರಲ್ಲಿ ಮೆಸ್ಸಿಯೂ ಒಬ್ಬರಾಗಿದ್ದರು. ಇದಕ್ಕೂ ಮೊದಲು ಅಲ್ಜೀರಿಯಾ ಹಾಗೂ ಆಸ್ಟ್ರಿಯಾ ವಿರುದ್ಧದ ಪಂದ್ಯಗಳಲ್ಲಿ ಅರ್ಜೆಂಟೀನಾ ಗಳಿಸಿದ್ದ ಐದು ಗೋಲುಗಳನ್ನೂ ಮೆಸ್ಸಿಯೇ ದಾಖಲಿಸಿದ್ದರು. ಆ ಪೈಕಿ ವಿಶ್ವಕಪ್‌ನ ಮೊದಲ ಹ್ಯಾಟ್ರಿಕ್ ಹಾಗೂ ಒಂದು ಪಂದ್ಯದಲ್ಲಿ ಎರಡು ಗೋಲುಗಳ ಸಾಧನೆಯೂ ಸೇರಿದೆ.

ವಿಶೇಷವೆಂದರೆ, ಮೆಸ್ಸಿ ಇದೀಗ ಸತತ ಏಳು ವಿಶ್ವಕಪ್ ಪಂದ್ಯಗಳಲ್ಲಿ ಗೋಲು ದಾಖಲಿಸಿದ ಅಪರೂಪದ ಸಾಧನೆ ಮಾಡಿದ್ದಾರೆ.

ಕೊನೆಯ ಒಂಬತ್ತು ವಿಶ್ವಕಪ್ ಪಂದ್ಯಗಳಲ್ಲಿ ಏಳು ಗೆಲುವು ಹಾಗೂ ಎರಡು ಡ್ರಾ ದಾಖಲಿಸಿರುವ ಅರ್ಜೆಂಟೀನಾ ಇನ್ನೂ ಅಜೇಯವಾಗಿ ಮುಂದುವರಿದಿದೆ. ಇದೀಗ ಪ್ರೀಕ್ವಾರ್ಟರ್‌ನಲ್ಲಿ ಕೇಪ್ ವರ್ಡೆ ತಂಡವನ್ನು ಎದುರಿಸಲಿದ್ದು, ಈ ಪಂದ್ಯ ಶುಕ್ರವಾರ ಅಮೆರಿಕದ ಮಿಯಾಮಿಯಲ್ಲಿ ನಡೆಯಲಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img