ಮುಂಬೈ: IPL 2026 ಟೂರ್ನಿ ಪ್ಲೇಆಫ್ ಹಂತದತ್ತ ಸಾಗುತ್ತಿರುವಂತೆ ಕ್ರಿಕೆಟ್ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.
ಇದರ ನಡುವೆ ಅಧಿಕೃತ ಪ್ರಸಾರ ಸಂಸ್ಥೆಗಳಾದ ಜಿಯೋಸ್ಟಾರ್, ಟಿವಿ ಮತ್ತು ಡಿಜಿಟಲ್ ಪ್ಲಾಟ್ ಫಾರ್ಮ್‌ಗಳಾದ್ಯಂತ ವೀಕ್ಷಕರ ಸಂಖ್ಯೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ.
ಟೂರ್ನಿಯ ಒಟ್ಟಾರೆ ವೀಕ್ಷಕರ ಸಂಖ್ಯೆ 110 ಕೋಟಿ ದಾಟಿದ್ದು, ಇದು ಟೂರ್ನಿ ಇತಿಹಾಸದಲ್ಲೇ ಮಹತ್ವದ ಮೈಲಿಗಲ್ಲಾಗಿದೆ. ಟಿವಿ ವೀಕ್ಷಕರ ಸಂಖ್ಯೆ ಕೂಡ 50 ಕೋಟಿಯತ್ತ ಮುನ್ನಡೆಯುತ್ತಿದೆ ಎಂದು ಸಂಸ್ಥೆ ತಿಳಿಸಿದೆ.
ಡಿಜಿಟಲ್ ವೇದಿಕೆಗಳಲ್ಲಿ ವೀಕ್ಷಕರ ಸಂಖ್ಯೆ ಶೇ.15ರಷ್ಟು ಹೆಚ್ಚಳವಾಗಿದ್ದು, ವೀಕ್ಷಣೆಯ ಸಮಯವೂ ಶೇ.7ರಷ್ಟು ಏರಿಕೆಯಾಗಿದೆ.
ಇದೇ ವೇಳೆ ಕನೆಕ್ಟೆಡ್ ಟಿವಿ ವಿಭಾಗದಲ್ಲೂ ಭಾರೀ ಬೆಳವಣಿಗೆ ಕಂಡುಬಂದಿದೆ. ಈ ವಿಭಾಗದಲ್ಲಿ ವೀಕ್ಷಕರ ಸಂಖ್ಯೆ ಶೇ.25ರಷ್ಟು ಹೆಚ್ಚಳವಾಗಿದ್ದು, ವೀಕ್ಷಣೆಯ ಅವಧಿ ಶೇ.20ರಷ್ಟು ಏರಿಕೆಯಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.



