ಬೆಂಗಳೂರು:- ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಗಾಳಿಯ ಗುಣಮಟ್ಟದಲ್ಲಿ ನಿರಂತರ ಕುಸಿತ ಕಾಣಿಸುತ್ತಿದೆ.
ಇಂದು ನಗರದಲ್ಲಿ ವಾಯು ಗುಣಮಟ್ಟ ಸೂಚ್ಯಂಕ 168ಕ್ಕೆ ಇಳಿದಿದ್ದು, ಶನಿವಾರ ದಾಖಲಾದ 206ಕ್ಕಿಂತ ಸ್ವಲ್ಪ ಸುಧಾರಣೆ ಕಂಡಿದೆ. ಆದರೂ ಗಾಳಿಯ ಗುಣಮಟ್ಟ ಇನ್ನೂ ಕಳಪೆಯ ಮಟ್ಟದಲ್ಲೇ ಇರುವುದರಿಂದ ಜನರು ಎಚ್ಚರಿಕೆ ವಹಿಸಬೇಕಾಗಿದೆ.
ತಜ್ಞರ ಪ್ರಕಾರ ಇಂದು AQI 138ರಿಂದ 218ರವರೆಗೆ ಏರಿಳಿತವಾಗುವ ಸಾಧ್ಯತೆ ಇದ್ದು, ಮಧ್ಯಾಹ್ನ ಸ್ವಲ್ಪ ಸುಧಾರಿಸಿ ಸಂಜೆ ಮತ್ತೆ ಕುಸಿಯುವ ಸಾಧ್ಯತೆ ಇದೆ. ಪರ್ಟಿಕ್ಯುಲೇಟ್ ಮ್ಯಾಟರ್ ಪ್ರಮುಖ ಮಾಲಿನ್ಯಕಾರಕಗಳಾಗಿವೆ. ಈ ಸ್ಥಿತಿಯಿಂದ ಮಕ್ಕಳು, ವೃದ್ಧರು ಹಾಗೂ ಉಸಿರಾಟ–ಹೃದಯ ಸಂಬಂಧಿ ಕಾಯಿಲೆ ಇರುವವರಿಗೆ ಆರೋಗ್ಯ ಅಪಾಯಗಳು ಹೆಚ್ಚಾಗುವ ಸಾಧ್ಯತೆ ಇದೆ.
ಇದೇ ಸಂದರ್ಭದಲ್ಲಿ ಬಳ್ಳಾರಿಯಲ್ಲಿ AQI 173 ದಾಖಲಾಗಿದ್ದು, ವಾಯು ಮಾಲಿನ್ಯ ಮತ್ತು ಕಳಪೆ ರಸ್ತೆಗಳ ಕಾರಣ ಈ ಸ್ಥಿತಿ ಉಂಟಾಗಿದೆ ಎಂದು ತಿಳಿದುಬಂದಿದೆ. ರಾಜ್ಯದ ಇತರ ನಗರಗಳಲ್ಲಿಯೂ ಗಾಳಿಯ ಗುಣಮಟ್ಟ ಮಧ್ಯಮದಿಂದ ಕಳಪೆ ಮಟ್ಟದಲ್ಲಿದೆ. ತಜ್ಞರು ಅನಾವಶ್ಯಕವಾಗಿ ಹೊರಗೆ ಹೋಗುವುದನ್ನು ತಪ್ಪಿಸಲು, ಹೊರಗೆ ತೆರಳುವಾಗ ಮಾಸ್ಕ್ ಧರಿಸಲು ಮತ್ತು WHO ಮಾರ್ಗಸೂಚಿಗಳನ್ನು ಪಾಲಿಸಲು ಸಲಹೆ ನೀಡಿದ್ದಾರೆ.
ಇಂದಿನ ನಗರವಾರು AQI:
ಬೆಂಗಳೂರು – 168
ಮಂಗಳೂರು – 138
ಮೈಸೂರು – 100
ಬೆಳಗಾವಿ – 168
ಕಲಬುರ್ಗಿ – 99
ಶಿವಮೊಗ್ಗ – 96
ಬಳ್ಳಾರಿ – 173
ಹುಬ್ಬಳ್ಳಿ – 96
ಉಡುಪಿ – 118
ವಿಜಯಪುರ – 115.



