ಬೆಂಗಳೂರು: ನಗರದ ಹಾಳಾದ ರಸ್ತೆಗಳು, ಗುಂಡಿಗಳು ಮತ್ತು ಮೂಲಸೌಕರ್ಯದ ಕೊರತೆಯಿಂದ ಬೇಸತ್ತ ಖಾಸಗಿ ಕಂಪನಿಗಳು ನಗರವನ್ನು ಬಿಟ್ಟು ಹೊರಡುವ ಸೂಚನೆ ಕೊಡಲು ಪ್ರಾರಂಭಿಸಿವೆ. ಇನ್ನೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಚಿವ ಡಾ. ಹೆಚ್ ಸಿ ಮಹದೇವಪ್ಪ ಪ್ರತಿಕ್ರಿಯೇ ನೀಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ‘ಬಿಜೆಪಿಯವರು ಇದ್ದಾಗ ಏನೂ ಕೆಲಸ ಮಾಡಿಲ್ಲ . ಹೀಗಾಗಿ ರಸ್ತೆಗಳು ಹಾಳಾಗಿವೆ’ ಎಂದು ಹೇಳಿದ್ದಾರೆ. ಬಿಜೆಪಿಯವರು ಇರೋ ರಸ್ತೆಯನ್ನು ಗುಂಡಿ ಮಾಡಿ ಹೋಗಿದ್ದಾರೆ ಅಂತ ನಾನು ಹೇಳ್ತಿಲ್ಲ. 700 ರಿಂದ 800 ಕಿಮೀ ರಸ್ತೆ ನಾನೇ ಲೋಕೋಪಯೋಗಿ ಸಚಿವನಾಗಿದ್ದಾಗ ಮಾಡಿದ್ದೆ.
ಮೂಲಸೌಕರ್ಯವನ್ನು ನಾವು ಹೆಚ್ಚಳ ಮಾಡಿದ್ದೇವೆ ಹಾಗೂ ಮಾಡುತ್ತೇವೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರು ರಸ್ತೆಗುಂಡಿ ಸಮಸ್ಯೆ ಸರಿಪಡಿಸಲು ಸಭೆ ಮಾಡಿದ್ದಾರೆ, ಕೆಲಸಗಳೂ ನಡೆಯುತ್ತಿವೆ. ಬೆಂಗಳೂರಿನ ವ್ಯವಸ್ಥೆ ಹಾಳಾಗಲು ನಾವು ಬಿಡುವುದಿಲ್ಲ ಎಂದರು.



