ಬೆಂಗಳೂರು: ವಿಪಕ್ಷದಲ್ಲಿದ್ದಾಗ ತಪ್ಪು ಮಾಡಿದ್ದನ್ನು ಕೇಳುವುದು ನಮ್ಮ ಅಧಿಕಾರ ಮತ್ತು ಹಕ್ಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ನಾವು ಪ್ರಿಯಾಂಕ್ ಖರ್ಗೆಯವರನ್ನ ಟಾರ್ಗೆಟ್ ಮಾಡುತ್ತಿಲ್ಲ.
ಬಟ್ಟೆ ಹರಿದುಕೊಳ್ಳುವುದು ಬಿಜೆಪಿ ಅಲ್ಲ, ಬಟ್ಟೆ ಹರಿದುಕೊಳ್ಳುವ ಕೆಲಸ ಮಾಡಿರುವುದು ನೀವು, ನಾವೇನು ನಿಮ್ಮ ಬಟ್ಟೆ ಹರಿಯಲ್ಲ. ಆಪಾದನೆ ಬಂದಾಗ ಯಾವ ರೀತಿ ಎದುರಿಸಬೇಕು ಹಾಗೆಯೇ ಎದುರಿಸಿ, ನ್ಯಾಯ ಕೊಡುವ ಕೆಲಸ ಮಾಡಿ. ರಾಜೀನಾಮೆ ತೀರ್ಮಾನ ನಿಮ್ಮದು ಹೋರಾಟ ನಮ್ಮದು ಎಂದಿದ್ದಾರೆ.
ಇನ್ನೂ ಮುತ್ತಿಗೆ ಹಾಕುವವರ ಅಡ್ರೆಸ್ ಕೊಡಿ; ಎಷ್ಟು ಜನ ಬರುವುದಾಗಿ ಹೇಳಿ ಕಳಿಸಿ, ನಾನು ಕಾಫಿ ಟೀ ವ್ಯವಸ್ಥೆ ಮಾಡುತ್ತೇನೆ ಎನ್ನುತ್ತಾರೆ. ಇದು ಉದ್ಧಟತನವಲ್ಲದೇ ಬೇರೇನು ಎಂದು ಕೇಳಿದರು. ನಿಮ್ಮ ಮನೆಯಲ್ಲಿ ಸಂಬಂಧ ಮಾಡಲು ಯಾರಾದರೂ ಬರುತ್ತಾರಾ,
ವಿಪಕ್ಷದಲ್ಲಿದ್ದಾಗ ತಪ್ಪು ಮಾಡಿದ್ದನ್ನು ಕೇಳುವುದು ನಮ್ಮ ಅಧಿಕಾರ ಮತ್ತು ಹಕ್ಕು. ಉತ್ತರ ಹೇಗೆ ಕೊಡಬೇಕೆಂದು ಗೊತ್ತಾಗದೆ ಇದ್ದರೆ ಬೇರೆಯವರನ್ನು ಕೇಳಿ ತಿಳಿದುಕೊಳ್ಳಿ ಎಂದು ಆಕ್ಷೇಪಿಸಿದರು. ಎಲ್ಲದರಲ್ಲೂ ಬಾಯಿ ಹಾಕಲು ಗೊತ್ತಾಗುವ ಅವರಿಗೆ ಇದು ಗೊತ್ತಾಗುವುದಿಲ್ಲವೇ ಎಂದು ಕೇಳಿದರು.