HomeGadag Newsಸತ್ಯದ ದಾರಿಯಲ್ಲಿ ನಡೆಯೋಣ : ಗುರು ತಿರ್ಲಾಪೂರ

ಸತ್ಯದ ದಾರಿಯಲ್ಲಿ ನಡೆಯೋಣ : ಗುರು ತಿರ್ಲಾಪೂರ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ನಗರದಲ್ಲಿ ಅಂಬಿಗ, ಗಂಗಾಮತ, ಸುಣಗಾರ ಸಮುದಾಯದಿಂದ ಮಹಾತ್ಮ ಗಾಂಧೀಜಿ ಹಾಗೂ ಲಾಲಬಹದ್ದೂರ ಶಾಸ್ತ್ರಿಯವರ ಜಯಂತಿ ಕಾರ್ಯಕ್ರಮವನ್ನು ಸಂಘದ ಕಾರ್ಯಾಲಯದಲ್ಲಿ ಆಚರಿಸಲಾಯಿತು.

ಮುಖ್ಯ ಅಥಿತಿಗಳಾಗಿ ಗದಗ ಜಿಲ್ಲಾ ಕೆಪಿಸಿಸಿ ಮೀನುಗಾರರ ವಿಭಾಗದ ಅಧ್ಯಕ್ಷ ಗುರು ತಿರ್ಲಾಪೂರ ಪಾಲ್ಗೊಂಡು ಮಾತನಾಡಿ, ರಾಷ್ಟ್ರದ ಧೀಮಂತ ನಾಯಕರಾದ ಮಹಾತ್ಮ ಗಾಂಧೀಜಿ ಹಾಗೂ ಲಾಲಬಹದ್ದೂರ ಶಾಸ್ತ್ರಿಯವರ ದೇಶಪ್ರೇಮ ಹಾಗೂ ಪ್ರಾಮಾಣಿಕತೆಯನ್ನು ಸ್ಮರಿಸಿ ಸತ್ಯದ ದಾರಿಯಲ್ಲಿ ನಾವೆಲ್ಲರೂ ಬದುಕೋಣ ಎಂದರು.

ಜಿಲ್ಲಾ ಅಂಬಿಗರ ಚೌಡಯ್ಯ ಸಮಾಜದ ಜಿಲ್ಲಾಧ್ಯಕ್ಷ ರಾಮಣ್ಣ ಇರಕಲ್ಲ ಗಾಂಧೀಜಿ ಹಾಗೂ ಶಾಸ್ತ್ರಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಎಲ್ಲರೊಂದಿಗೆ ಸಹೋದರತೆಯಿಂದ ಬಾಳೋಣ ಎಂದರು. ಸಮಾಜದ ಪ್ರಧಾನ ಕಾರ್ಯದರ್ಶಿ ಸಂಗಮೇಶ ಹಾದಿಮನಿ ಮಾತನಾಡಿ, ಮಾನವ ಜನ್ಮ ಶ್ರೇಷ್ಠವಾದುದು. ಎಲ್ಲರೊಂದಿಗೆ ಸಹಕಾರ, ಪ್ರೀತಿ-ವಿಶ್ವಾಸದೊಂದಿಗೆ ನಾವೆಲ್ಲರೂ ಒಂದು ಎನ್ನುವ ಭಾವ ಹೊಂದೋಣ ಎಂದರು.

ಈ ಸಂದರ್ಭದಲ್ಲಿ ಸಮಾಜದ ಪ್ರಮುಖರಾದ ಮಹಾದೇವ ಬಾಣದ, ಪ್ರವೀಣ ನೀಲಣ್ಣವರ, ಅಮಿತ ಪೂಜಾರ, ರಾಜು ಪೂಜಾರ, ಸುಜಾತ ಗುಡಿಸಾಗರ, ಸೌಮ್ಯ ಸುಣಗಾರ, ಸುಜಾತಾ ಬಾರಕೇರ, ಚಂದ್ರಶೇಖರ ಬಾರಕೇರ, ರಮೇಶ ಬೆಣಕಲ್ಲ, ಹರೀಶ ಬಾರಕೇರ, ಮಂಜುನಾಥ ಗುಡಿಸಾಗರ, ಬಸವರಾಜ ಗುಡಿಸಾಗರ, ಮಾರುತಿ ಬಾರಕೇರ, ನಿಂಗಪ್ಪ ಇಟಗಿ, ಪಕ್ಕೀರೇಶ ಹುಳ್ಯಾಳ, ಮನೋಜ ಸಿಂಗ್, ವಿನೋದ ಬಾರಕೇರ, ಸುಣಗಾರ, ಪ್ರಕಾಶ ಬಾಣದ, ರವಿಕುಮಾರ ಗುಡಿಸಾಗರ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img