ಕಾರ್ಮಿಕರಿಗಾಗಿ ಕಬಡ್ಡಿ, ಖೋಖೋ ಆಟ

0
mundaragi
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಜಿಲ್ಲೆಯ ಮುಂಡರಗಿ ತಾಲೂಕು ಪಂಚಾಯಿತಿ ವಿಭಿನ್ನ ಮತ್ತು ವಿಶಿಷ್ಟ ನಡೆ ಅನುಸರಿಸಿ, ನರೇಗಾ ಯೋಜನೆಗೆ ಸಾಂಸ್ಕೃತಿಕ, ಜನಪದ ಮೆರುಗು ನೀಡುತ್ತಿದೆ. ನರೇಗಾ ಯೋಜನೆಯಡಿ ಹೆಚ್ಚು ಮಾನವ ದಿನಗಳನ್ನು ಸೃಜಿಸಿ ಗ್ರಾಮೀಣ ಕೃಷಿ ಕೂಲಿ ಕಾರ್ಮಿಕರನ್ನು ಕೆಲಸದಲ್ಲಿ ತೊಡಗಿಸಲು ಮುಂಡರಗಿ ತಾ.ಪಂ ಮುಂದಾಗಿದ್ದು, ಕೃಷಿ ಕಾರ್ಮಿಕರನ್ನು ಸೆಳೆಯಲು ಕೆಲಸ ಮುಗಿಸಿದ ನಂತರ ದೇಸಿ ಆಟಗಳನ್ನು ಆಡಿಸಲಾಗುತ್ತಿದೆ.

Advertisement

ಮಹಿಳಾ ಕಾರ್ಮಿಕರಿಂದ ಸೋಬಾನ ಪದ (ಜನಪದ ಹಾಡು) ಹಾಡಿಸಿ ಮನರಂಜನೆಯನ್ನೂ ನೀಡಲಾಗುತ್ತಿದೆ. ಜೊತೆಗೆ ಕಬ್ಬಡ್ಡಿ, ಖೋಖೋದಂತಹ ಕ್ರೀಡೆಗಳಿಗೆ ನರೇಗಾ ಕಾಮಗಾರಿ ಮೂಲಕ ಜನಪ್ರಿಯಗೊಳಿಸುತ್ತಿದೆ. ಅದರಲ್ಲೂ ದೇಸಿ ಕ್ರೀಡೆಗಳನ್ನು ಆಯ್ದುಕೊಂಡು ಕೂಲಿಕಾರ ಮಹಿಳೆಯರನ್ನು ಸಕ್ರಿಯಗೊಳಿಸಿರುವುದು ವಿಶೇಷವಾಗಿದೆ.

ದುಡಿಯುವ ಕೂಲಿಕಾರರಿಗೆ ಮನರಂಜನೆಯೂ ಮುಖ್ಯ. ಮಳೆಗಾಲ ಮರೀಚಿಕೆಯಾದ ಈ ದಿನಗಳಲ್ಲಿ ನರೇಗಾ ಯೋಜನೆ ಗ್ರಾಮೀಣ ಜನರಿಗೆ ದಾರಿದೀಪ. ಇದನ್ನು ಮನಗಂಡ ಮುಂಡರಗಿ ತಾ.ಪಂ ಸುಸ್ಥಿರ ನರೇಗಾ ಅಂಕೆ-ಸಂಖ್ಯೆ ಅಭಿವೃದ್ಧಿಯತ್ತ ಸಾಂಸ್ಕೃತಿಕ, ಜನಪದ ಚಟುವಟಿಕೆಗಳ ಮೂಲಕ ಗಮನ ಹರಿಸಿ ಜನರಿಗೆ ಮಾಹಿತಿ ತಲುಪಿಸುತ್ತಿರುವುದು ಮಾದರಿಯಾಗಿದೆ.

ಗ್ರಾಮೀಣ ಪ್ರದೇಶದ ಪುರುಷರಿಗಿಂತ ಮಹಿಳೆಯರೇ ಈ ಆಟದಲ್ಲಿ ಹೆಚ್ಚು ತೊಡಗಿಕೊಂಡಿದ್ದಾರೆ. ಹೀಗಾಗಿ, ಮುಂಡರಗಿ ತಾಲೂಕು ಪಂಚಾಯಿತಿ ಕಳೆದ ವರ್ಷ ನರೇಗಾ ಕಾಮಗಾರಿಗಳಲ್ಲಿ ಮಹಿಳಾ ಭಾಗವಹಿಸುವಿಕೆ ಪ್ರಮಾಣದಲ್ಲಿ ಶೇ.50ರಷ್ಟು ಯಶಸ್ಸು ಸಾಧಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ನರೇಗಾ ಕಾಮಗಾರಿಗಳ ಜೀವನಾಡಿ, ಭಾರತ ಹಳ್ಳಿಗಳಿಂದ ಕೂಡಿದ ದೇಶ. ಬೇಸಿಗೆ ಕಾಲದಲ್ಲಿ ಗ್ರಾಮೀಣ ಕೂಲಿ ಕಾರ್ಮಿಕರಿಗೆ ಕೆಲಸ ಸಿಕ್ಕರೆ ಆಗುವ ಅನುಕೂಲ ನೂರೆಂಟು. ಆ ದಿಶೆಯಲ್ಲಿ ಮುಂಡರಗಿ ತಾ.ಪಂ ಕಾರ್ಯನಿರತವಾಗಿದೆ.
– ವಿಶ್ವನಾಥ ಹೊಸಮನಿ.
ತಾ.ಪಂ ಇಓ, ಮುಂಡರಗಿ.


Spread the love

LEAVE A REPLY

Please enter your comment!
Please enter your name here