ವಿಜಯಸಾಕ್ಷಿ ಸುದ್ದಿ, ಗದಗ : ನಗರದ ಹಳೇ ಸರಾಫ್ ಬಜಾರದ ಶ್ರೀ ಜಗದಂಬಾ ದೇವಸ್ಥಾನದ ಅವರಣದಲ್ಲಿ 145ನೇ ವರ್ಷದ ಕಾಮ-ರತಿ ಉತ್ಸವಕ್ಕೆ ಗದಗ ಎಸ್ಎಸ್ಕೆ ಸಮಾಜ ಪಂಚ ಟ್ರಸ್ಟ್ ಕಮಿಟಿ ಗೌರವ ಕಾರ್ಯದರ್ಶಿ ವಿನೋದ ಶಿದ್ಲಿಂಗ ಚಾಲನೆ ನೀಡಿದರು.
ಹೋಳಿ ಹುಣ್ಣಿಮೆಯ ದಿನವಾದ ಸೋಮವಾರ ಬೆಳಿಗ್ಗೆ 10.30 ಗಂಟೆಗೆ ಎಸ್ಎಸ್ಕೆ ಸಮಾಜದ ತರುಣ ಸಂಘದ ನೇತೃತ್ವದಲ್ಲಿ ಕಾಮ-ರತಿ ಸ್ಥಾಪಿಸಿ, ಪೂಜಾ ವಿಧಿ-ವಿಧಾನಗಳನ್ನು ಜರುಗಿಸಲಾಯಿತು. ಪ್ರಥಮ ದಿನ ಪೂಜೆಯ ನಂತರ ತರುಣ ಸಂಘದ ಅಧ್ಯಕ್ಷ ವಿಶ್ವನಾಥ ಸೂಳಂಕಿ ಮಾತನಾಡಿ, ಶತಮಾನಗಳಿಂದ ಈ ಭಾಗದಲ್ಲಿ ಎಸ್ಎಸ್ಕೆ ಸಮಾಜದ ವತಿಯಿಂದ ಕಾಮ-ರತಿಗಳನ್ನು ಪ್ರತಿಷ್ಠಾಪಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.
ನಂತರ ಎಸ್ಎಸ್ಕೆ ಸಮಾಜದ ಹಿರಿಯರು ಮತ್ತು ಗಣ್ಯರು ಚರ್ಚಿಸಿ ಪ್ರತಿ ವರ್ಷದಂತೆ ಈ ವರ್ಷವೂ ಅತೀ ಅದ್ದೂರಿಯಿಂದ ಕಾಮ-ರತಿ ಉತ್ಸವವನ್ನು ಆಚರಿಸಲು ನಿರ್ಣಯಿಸಿದರು. ಈ ಸಂದರ್ಭದಲ್ಲಿ ಸಮಾಜದ ಹಿರಿಯರಾದ ತುಕಾರಾಮಸಾ ರಾಯಬಾಗಿ, ತರುಣ ಸಂಘದ ಉಪಾಧ್ಯಕ್ಷ ಮಾಧು ಬದಿ, ಗೌ.ಕಾರ್ಯದರ್ಶಿ ನಾಗರಾಜ ಖೋಡೆ, ಕಾರ್ಯದರ್ಶಿ ಶ್ರೀಕಾಂತ ಬಾಕಳೆ, ಖಜಾಂಚಿ ಶ್ರೀನಿವಾಸ ಬಾಂಡಗೆ, ರಾಮಚಂದ್ರಸಾ ಶಿದ್ಲಿಂಗ, ರಾಘವೇಂದ್ರ ಬಾಂಡಗೆ, ಜಗದೀಶ ಪವಾರ, ದೇವಸ್ಥಾನದ ಅರ್ಚಕ ನಾಗರಾಜ ಪೂಜಾರಿ, ಮಹಿಳಾ ಮಂಡಳದ ಅಧ್ಯಕ್ಷರಾದ ಉಮಾಬಾಯಿ ಬೇವಿನಕಟ್ಟಿ, ಉಪಾಧ್ಯಕ್ಷರಾದ ಸ್ನೇಹಲತಾ ಕಬಾಡಿ, ಕಾರ್ಯದರ್ಶಿ ರೇಖಾ ಬೇವಿನಕಟ್ಟಿ, ನಂದಾ ಶಿದ್ಲಿಂಗ ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.