Homecinemaತಮಿಳಿನಿಂದ ಕನ್ನಡ ಎಂದ ಕಮಲ್ ಹಾಸನ್ : ಕ್ಷಮೆಯಾಚಿಸುವಂತೆ ಕನ್ನಡಿಗರ ವ್ಯಾಪಕ ಆಗ್ರಹ!

ತಮಿಳಿನಿಂದ ಕನ್ನಡ ಎಂದ ಕಮಲ್ ಹಾಸನ್ : ಕ್ಷಮೆಯಾಚಿಸುವಂತೆ ಕನ್ನಡಿಗರ ವ್ಯಾಪಕ ಆಗ್ರಹ!

For Dai;y Updates Join Our whatsapp Group

Spread the love

ಕರ್ನಾಟಕದಲ್ಲಿ ಕನ್ನಡವೇ ಮೊದಲು ಎನ್ನುವ ವಿಚಾರವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಈ ಸಂದರ್ಭದಲ್ಲಿ ದಕ್ಷಿಣದ ಭಾಷೆಗಳ ಜನರ ಒಂದಾಗಿ ಹಿಂದಿ ವಿರುದ್ಧ ಹೋರಾಡ ಬೇಕು ಎನ್ನುವ ಅಭಿಯಾನ ಜೋರಾಗಿ ಇರುವಾಗಲೇ ತಮಿಳು – ಕನ್ನಡದ ನಡುವೆ ಸಂಘರ್ಷ ಮತ್ತೊಮ್ಮೆ ಶುರುವಾಗುವ ಸಾಧ್ಯತೆ ದಟ್ಟವಾಗಿದೆ. ಇದಕ್ಕೆ ನಟ ಕಮಲ್‌ ಹಾಸನ್‌ ನೀಡಿರುವ ಹೇಳಿಕೆಯೇ ಕಾರಣ.

ತಮಿಳಿನಿಂದ ಕನ್ನಡ ಹುಟ್ಟಿದ್ದು ಎಂದ ಕಮಲ್ ಹಾಸನ್ ಹೇಳಿಕೆಗೆ ಕರವೇ ಮತ್ತು ಕನ್ನಡಪರ ಸಂಘಟನೆ ಕ್ಷಮೆಯಾಚಿಸುವಂತೆ ಪಟ್ಟುಹಿಡಿದಿವೆ. ಕಮಲ್ ಹೇಳಿಕೆಗೆ ಕನ್ನಡಪರ ಸಂಘಟನೆಗಳು ಕ್ಷಮೆ ಯಾಚಿಸುವಂತೆ ಫಿಲ್ಮ್ ಚೇಂಬರ್‌ಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಕನ್ನಡ ಭಾಷೆಗೆ 4ರಿಂದ 5 ಸಾವಿರ ವರ್ಷಗಳ ಇತಿಹಾಸವಿದೆ. ಅವರು ಆಡಿದ ಮಾತಿನಿಂದ ದ್ರಾವಿಡ ಭಾಷೆಗಳು ಒಗ್ಗಟ್ಟಿಗೆ ದಕ್ಕೆಯಾಗಿದೆ. ಕಮಲ್ ಅತ್ಯುತ್ತಮ ಕಲಾವಿದ, ಅವರು ಕನ್ನಡ ಚಿತ್ರಗಳಲ್ಲೂ ನಟಿಸಿದ್ದಾರೆ. ನಟನ ಮಾತಿನಿಂದ ಕನ್ನಡಿಗರು, ತಮಿಳರ ನಡುವೆ ದ್ವೇಷ ಹುಟ್ಟುವಂತೆ ಮಾಡಿದ್ದಾರೆ. ತಕ್ಷಣ ತಮ್ಮ ತಪ್ಪನ್ನ ಅವರು ತಿದ್ದುಕೊಂಡು ಕನ್ನಡಿಗರಿಗೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಕ್ಷಮೆಯಾಚಿಸದಿದ್ದರೆ ‘ಥಗ್‌ ಲೈಫ್‌’ ಚಿತ್ರದ ರಿಲೀಸ್‌ಗೆ ತಡೆ ನೀಡೋದಾಗಿ ಕರವೇ ಮತ್ತು ಕನ್ನಡಪರ ಸಂಘಟನೆ ಎಚ್ಚರಿಸಿದೆ.

ಮೇ 27ರಂದು ಬೆಂಗಳೂರಿನಲ್ಲಿ ನಡೆದ ‘ಥಗ್ ಲೈಫ್’ ಪ್ರಚಾರ ಕಾರ್ಯಕ್ಕೆ ನಟ ಶಿವಣ್ಣ ಅತಿಥಿಯಾಗಿ ಭಾಗವಹಿಸಿದ್ದರು. ಈ ವೇಳೆ, ರಾಜ್‌ಕುಮಾರ್ ಜೊತೆಗಿನ ಒಡನಾಡವನ್ನು ಕಮಲ್ ಹಾಸನ್ ಸ್ಮರಿಸಿದರು. ಬಳಿಕ ಶಿವಣ್ಣ ಎದುರೇ ನಿಮ್ಮ ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂದು ನಟ ಹೇಳಿದ್ದಾರೆ. ಕನ್ನಡಿಗರ ಪ್ರೀತಿ, ಗೌರವಕ್ಕೆ ನಮಿಸುತ್ತಲೇ ನಿಮ್ಮ ಕನ್ನಡ ನಮ್ಮಿಂದ ಬಂದಿದ್ದು ಎಂದ ಕಮಲ್ ಹೇಳಿಕೆಗೆ ಕನ್ನಡಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!