ಅಜರ್ಬೈಜಾನ್ : ಕಝುಕಿಸ್ತಾನದಲ್ಲಿ ಘೋರ ವಿಮಾನ ದುರಂತ ಸಂಭವಿಸಿದೆ. ವಿಮಾನ ಸ್ಫೋಟಗೊಂಡ ಪರಿಣಾಮ ಬರೋಬ್ಬರಿ 70 ಮಂದಿ ದುರ್ಮರಣಕ್ಕೀಡಾಗಿದ್ದು, 30ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಅಕ್ತಾವ್ ಏರ್ಪೋರ್ಟ್ ಸಮೀಪವೇ ಭೀಕರ ದುರಂತ ಸಂಭವಿಸಿದ್ದು ವಿಮಾನ ಪತನವಾಗುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅಜರ್ಬೈಜಾನ್ ವಿಮಾನಯಾನ ಸಂಸ್ಥೆಗೆ ಸೇರಿದ ಪ್ರಯಾಣಿಕರ ವಿಮಾನ ಅಪಘಾತಕ್ಕೀಡಾಗಿದೆ. ಅಜರ್ಬೈಜಾನ್ ದೇಶದ ರಾಜಧಾನಿ ಬಾಕುವಿನಿಂದ ರಷ್ಯಾದ ಚೆಚೆನ್ಯೂ ಸಮೀಪದ ಗ್ರೋಜ್ನಿಗೆ ವಿಮಾನ ಹೋಗ್ತಿತ್ತು. ಭಾರೀ ಅಪಾಯದ ಸೂಚನೆ ಸಿಕ್ಕ ಬೆನ್ನಲ್ಲೇ ವಿಮಾನದ ಪೈಲೆಟ್ ಎಮರ್ಜೆನ್ಸಿ ಲ್ಯಾಂಡಿಂಗ್ಗೆ ಅನುಮತಿ ಕೇಳಿದ್ದರು. ಅಷ್ಟರಲ್ಲಾಗಲೇ ಆಕಾಶದಲ್ಲೇ ವಿಮಾನ ಸ್ಫೋಟಗೊಂಡು ಹಾರುತ್ತಿದ್ದಾಗಲೇ ನೆಲಕ್ಕೆ ಅಪ್ಪಳಿಸಿದೆ.
ವಿಮಾನದಲ್ಲಿ ಸಿಬ್ಬಂದಿ ಸೇರಿ 105 ಮಂದಿ ಇದ್ದರೂ ಎನ್ನಲಾಗ್ತಿದ್ದು ಆ ಪೈಕಿ 70 ಮಂದಿ ಸಾವಿಗೀಡಾಗಿದ್ದಾರೆ. 30ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ. ಕಝಕಿಸ್ತಾನದ ವಿಮಾನ ದುರಂತದ ದೃಶ್ಯಗಳು ಸೆರೆಯಾಗಿದ್ದು ಘಟನೆಯಲ್ಲಿ ಸಾವು-ನೋವುಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.