HomeEntertainment‘ಕೆಜಿಎಫ್ 3’ಗೆ ಇನ್ನೂ ಸಮಯ ಬೇಕು: ‘ಸಲಾರ್ 2’ ಬಗ್ಗೆ ದೊಡ್ಡ ಅಪ್ಡೇಟ್ ಕೊಟ್ಟ ಪ್ರಶಾಂತ್...

‘ಕೆಜಿಎಫ್ 3’ಗೆ ಇನ್ನೂ ಸಮಯ ಬೇಕು: ‘ಸಲಾರ್ 2’ ಬಗ್ಗೆ ದೊಡ್ಡ ಅಪ್ಡೇಟ್ ಕೊಟ್ಟ ಪ್ರಶಾಂತ್ ನೀಲ್

For Dai;y Updates Join Our whatsapp Group

Spread the love

ಹೈದರಾಬಾದ್: ಪ್ಯಾನ್ ಇಂಡಿಯಾ ನಿರ್ದೇಶಕ ಪ್ರಶಾಂತ್ ನೀಲ್ ಇದೀಗ ‘ಸಲಾರ್ 2’ ಸಿನಿಮಾದ ಬಗ್ಗೆ ಸ್ಪಷ್ಟ ಅಪ್ಡೇಟ್ ನೀಡಿ ಸಿನಿಪ್ರೇಕ್ಷಕರ ಕುತೂಹಲ ಹೆಚ್ಚಿಸಿದ್ದಾರೆ. ಆದರೆ ಇದೇ ವೇಳೆ ‘ಕೆಜಿಎಫ್ 3’ ಕುರಿತು ಅವರು ನೀಡಿದ ಪ್ರತಿಕ್ರಿಯೆ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

ಪ್ರಭಾಸ್ ಅಭಿನಯದ ‘ಸಲಾರ್: ಪಾರ್ಟ್ 1 – ಸೀಸ್‌ಫೈರ್’ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿತ್ತು. ಈಗ ಅದರ ಮುಂದುವರಿದ ಭಾಗ ‘ಸಲಾರ್: ಪಾರ್ಟ್ 2 – ಶೌರ್ಯಾಂಗ ಪರ್ವಂ’ ಯಾವಾಗ ಶುರುವಾಗಲಿದೆ ಎಂಬ ಪ್ರಶ್ನೆಗೆ ಪ್ರಶಾಂತ್ ನೀಲ್ ಉತ್ತರ ನೀಡಿದ್ದಾರೆ.

ಸದ್ಯ ಜೂನಿಯರ್ ಎನ್‌ಟಿಆರ್ ಜೊತೆ ‘ಡ್ರ್ಯಾಗನ್’ ಸಿನಿಮಾ ಮಾಡುತ್ತಿರುವ ಅವರು, ಆ ಚಿತ್ರದ ಕೆಲಸ ಮುಗಿದ ತಕ್ಷಣವೇ ‘ಸಲಾರ್ 2’ ಶೂಟಿಂಗ್ ಆರಂಭವಾಗಲಿದೆ ಎಂದು ಹೇಳಿದ್ದಾರೆ. ‘ಗಲಾಟಾ ಪ್ಲಸ್’ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಡ್ರ್ಯಾಗನ್ ನಂತರ ನನ್ನ ಸಂಪೂರ್ಣ ಗಮನ ಸಲಾರ್ 2 ಕಡೆ ಇರಲಿದೆ’ ಎಂದು ತಿಳಿಸಿದ್ದಾರೆ.

ಇದೇ ವೇಳೆ ‘ಕೆಜಿಎಫ್ 3’ ಬಗ್ಗೆ ಮಾತನಾಡಿದ ಪ್ರಶಾಂತ್ ನೀಲ್, ‘ಆ ಫ್ರಾಂಚೈಸಿಗೆ ನಾನು ಯಾವಾಗ ಮರಳುತ್ತೇನೆ ಎಂಬುದರ ಬಗ್ಗೆ ಇನ್ನೂ ಅಂತಿಮ ತೀರ್ಮಾನವಾಗಿಲ್ಲ’ ಎಂದು ಹೇಳಿದ್ದಾರೆ.

ಪ್ರಶಾಂತ್ ನೀಲ್ ತಮ್ಮ ಮುಂದಿನ ಸಿನಿಮಾ ಯೋಜನೆಗಳ ಬಗ್ಗೆಯೂ ಮಾಹಿತಿ ಹಂಚಿಕೊಂಡಿದ್ದಾರೆ. ಡಾರ್ಕ್ ಥೀಮ್ ಆ್ಯಕ್ಷನ್ ಸಿನಿಮಾಗಳಿಂದ ಸ್ವಲ್ಪ ಬ್ರೇಕ್ ತೆಗೆದುಕೊಂಡು, ಪೌರಾಣಿಕ ಕಥಾಹಂದರದ ಕಲರ್‌ಫುಲ್ ಸಿನಿಮಾ ಸರಣಿ ಮಾಡಲು ಅವರು ಆಸಕ್ತಿ ತೋರಿದ್ದಾರೆ. ಜೊತೆಗೆ ಸಣ್ಣ ಬಜೆಟ್‌ನ ಭಾವನಾತ್ಮಕ ಕುಟುಂಬ ಕಥೆಯ ಸಿನಿಮಾ ಮಾಡುವ ಕನಸನ್ನೂ ಹೊರಹಾಕಿದ್ದಾರೆ.

‘ಸಲಾರ್ 2’ನಲ್ಲಿ ದೇವ ಮತ್ತು ವರದರಾಜ ಮನ್ನಾರ್ ನಡುವಿನ ಯುದ್ಧ ಮತ್ತಷ್ಟು ತೀವ್ರವಾಗಲಿದೆ. ಮೊದಲ ಭಾಗದಲ್ಲಿ ಕಟ್ಟಿಕೊಡಲಾದ ಸ್ನೇಹ ಮತ್ತು ದ್ರೋಹದ ಕಥೆ, ಎರಡನೇ ಭಾಗದಲ್ಲಿ ರಕ್ತಪಾತದ ಅಧಿಕಾರ ಸಮರವಾಗಿ ಮಾರ್ಪಡಲಿದೆ ಎಂದು ಹೇಳಲಾಗುತ್ತಿದೆ.

ಚಿತ್ರದಲ್ಲಿ ಪ್ರಭಾಸ್, ಪೃಥ್ವಿರಾಜ್ ಸುಕುಮಾರನ್, ಜಗಪತಿ ಬಾಬು, ಬಾಬಿ ಸಿಂಹ, ಶ್ರುತಿ ಹಾಸನ್, ಶ್ರಿಯಾ ರೆಡ್ಡಿ ಸೇರಿದಂತೆ ಹಲವರು ನಟಿಸುತ್ತಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!