HomeKarnataka Newsನಾಲೆಯಲ್ಲಿ ಕೊಚ್ಚಿಯೋದ ಪ್ರಕರಣ: 17 ಗಂಟೆ ಬಳಿಕ ಬಾಲಕನ ಮೃತದೇಹ ಪತ್ತೆ

ನಾಲೆಯಲ್ಲಿ ಕೊಚ್ಚಿಯೋದ ಪ್ರಕರಣ: 17 ಗಂಟೆ ಬಳಿಕ ಬಾಲಕನ ಮೃತದೇಹ ಪತ್ತೆ

For Dai;y Updates Join Our whatsapp Group

ಮಂಡ್ಯ: ನಾಲೆಯಲ್ಲಿ ಬಾಲಕ ಕೊಚ್ಚಿಯೋದ ಪ್ರಕರಣಕ್ಕೆ ಸಂಬಂಧಿಸಿದಂತೆ 17 ಗಂಟೆ ಬಳಿಕ ಬಾಲಕನ ಮೃತದೇಹ ಪತ್ತೆಯಾಘಿರುವ ಘಟನೆ ಮಂಡ್ಯ ತಾಲೂಕಿನ ಹೊನಗಾನಹಳ್ಳಿ ಮಠ ಗ್ರಾಮದಲ್ಲಿ ನಡೆದಿದೆ. ಸಬಿನ್ ರಾಜ್ (4) ಮೃತ ಬಾಲಕನಾಗಿದ್ದು, ನೆನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ನಾಲೆಯಲ್ಲಿ ಕೊಚ್ಟಿಹೋಗಿದ್ದನು.

ಸಂಜೆಯಿಂದ ರಾತ್ರಿ 9 ಗಂಟೆಯವರೆಗೂ ಅಗ್ನಿ ಶಾಮಕದಳ ಬಾಲಕನಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಬಳಿಕ ಕಾರ್ಯಾಚರಣೆ ಸ್ಥಗಿತಗೊಳಿಸಿ ಇಂದು ಮತ್ತೆ ಶೋಧ ನಡೆಸಲು ನಿರ್ಧರಿಸಲಾಗಿತ್ತು. ಆದ್ರೆ ನಾಲೆಯಲ್ಲಿ ಸಂಪೂರ್ಣ ನೀರು ನಿಲ್ಲಿಸಿದ್ರಿಂದ ಮೃತದೇಹ ಪತ್ತೆಯಾಗಿದೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img