HomeKarnataka Newsಹ್ಮಗಿರಿ ಬೆಟ್ಟದಲ್ಲಿ ಏನಾಯ್ತು? ಏಕಾಏಕಿ ಮುರಿದುಬಿದ್ದ ಬೃಹತ್ ಕಲ್ಲುಬಂಡೆಗಳು! ಗ್ರಾಮಸ್ಥರಲ್ಲಿ ಆತಂಕ

ಹ್ಮಗಿರಿ ಬೆಟ್ಟದಲ್ಲಿ ಏನಾಯ್ತು? ಏಕಾಏಕಿ ಮುರಿದುಬಿದ್ದ ಬೃಹತ್ ಕಲ್ಲುಬಂಡೆಗಳು! ಗ್ರಾಮಸ್ಥರಲ್ಲಿ ಆತಂಕ

For Dai;y Updates Join Our whatsapp Group

ಚಿಕ್ಕಬಳ್ಳಾಪುರ: ವಿಶ್ವವಿಖ್ಯಾತ ನಂದಿಗಿರಿಧಾಮದ ಸಮೀಪವಿರುವ ಬ್ರಹ್ಮಗಿರಿ ಬೆಟ್ಟದಲ್ಲಿ ಭಾರೀ ಸ್ಫೋಟದಂತಹ ಸದ್ದಿನೊಂದಿಗೆ ಬೃಹತ್ ಕಲ್ಲುಬಂಡೆಗಳು ಉರುಳಿಬಿದ್ದ ಘಟನೆ ನಡೆದಿದೆ. ಬೆಟ್ಟದ ಮೇಲ್ಭಾಗದಲ್ಲಿದ್ದ ಬಂಡೆಗಳು ಏಕಾಏಕಿ ಮುರಿದು ಕಣಿವೆಯತ್ತ ಉರುಳಿದ್ದು, ಭಾರೀ ಶಬ್ದ ಕೇಳಿ ಸುತ್ತಮುತ್ತಲಿನ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಸ್ಫೋಟದಂತಹ ಸದ್ದು ಕೇಳಿ ಬೆಚ್ಚಿಬಿದ್ದ ಗ್ರಾಮಸ್ಥರು!

ಚಿಕ್ಕಬಳ್ಳಾಪುರ ತಾಲೂಕಿನ ನಂದಿಗಿರಿಧಾಮದ ಪಕ್ಕದಲ್ಲಿರುವ ಬ್ರಹ್ಮಗಿರಿ ಬೆಟ್ಟದಲ್ಲಿ ಈ ಘಟನೆ ಸಂಭವಿಸಿದೆ. ಬೆಟ್ಟದ ಮೇಲ್ಭಾಗದಲ್ಲಿದ್ದ ಬೃಹತ್ ಬಂಡೆಯೊಂದು ಆಕಸ್ಮಿಕವಾಗಿ ಮುರಿದು ಕೆಳಗೆ ಉರುಳಿದೆ. ಈ ವೇಳೆ ಸ್ಫೋಟ ಸಂಭವಿಸಿದಂತಹ ಭಾರೀ ಶಬ್ದ ಕೇಳಿಬಂದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

ಮೊಬೈಲ್ ಕ್ಯಾಮೆರಾದಲ್ಲಿ ಭಯಾನಕ ದೃಶ್ಯ ಸೆರೆ

ಬ್ರಹ್ಮಗಿರಿ ಬೆಟ್ಟದಿಂದ ಬೃಹತ್ ಕಲ್ಲುಬಂಡೆಗಳು ಕಣಿವೆಯತ್ತ ಉರುಳುತ್ತಿರುವ ದೃಶ್ಯವನ್ನು ಕಣಿವೆಪುರ ಗ್ರಾಮದ ಸಮೀಪದಿಂದ ಸ್ಥಳೀಯರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಬಂಡೆಗಳು ಉರುಳುವಾಗ ಭಾರೀ ಪ್ರಮಾಣದ ಧೂಳು ಮೇಲೇಳುತ್ತಿರುವ ದೃಶ್ಯವೂ ವಿಡಿಯೋದಲ್ಲಿ ದಾಖಲಾಗಿದೆ.

ಅದೃಷ್ಟವಶಾತ್ ತಪ್ಪಿದ ದೊಡ್ಡ ಅನಾಹುತ

ಘಟನೆ ನಡೆದ ಸಂದರ್ಭದಲ್ಲಿ ಬೆಟ್ಟದ ಅರಣ್ಯ ಪ್ರದೇಶದಲ್ಲಿ ದನಗಾಹಿಗಳು ಹಾಗೂ ಕುರಿಗಾಹಿಗಳು ಇರಲಿಲ್ಲ ಎಂದು ತಿಳಿದುಬಂದಿದೆ. ಹೀಗಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ವರದಿಯಾಗಿದೆ. ಬೃಹತ್ ಬಂಡೆಗಳು ಉರುಳಿದ ಪ್ರದೇಶದಲ್ಲಿ ಜನರು ಅಥವಾ ಜಾನುವಾರುಗಳು ಇದ್ದಿದ್ದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆಯಿತ್ತು.

ಬಂಡೆಗಳು ಉರುಳಲು ಕಾರಣವೇನು?

ಚಿಕ್ಕಬಳ್ಳಾಪುರ ಅರಣ್ಯ ಇಲಾಖೆ ವ್ಯಾಪ್ತಿಯ ಬ್ರಹ್ಮಗಿರಿ ಬೆಟ್ಟದಲ್ಲಿ ಬೃಹತ್ ಬಂಡೆಗಳು ಆಕಸ್ಮಿಕವಾಗಿ ಮುರಿದು ಬೀಳಲು ನಿಖರ ಕಾರಣವೇನು ಎಂಬುದು ಇನ್ನೂ ತಿಳಿದುಬಂದಿಲ್ಲ. ಬಂಡೆಗಳು ನೈಸರ್ಗಿಕವಾಗಿ ಕುಸಿದಿವೆಯೇ ಅಥವಾ ಬೇರೆ ಕಾರಣವಿದೆಯೇ ಎಂಬುದು ಪರಿಶೀಲನೆಯ ಬಳಿಕವಷ್ಟೇ ಸ್ಪಷ್ಟವಾಗಬೇಕಿದೆ.

 

Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img