ಬೆಂಗಳೂರು: ನೆಲಮಂಗಲ ನಗರದ ವೀವರ್ಸ್ ಕಾಲೋನಿಯಲ್ಲಿ ಯುವಕನೋರ್ವ ಸಾಲ ಮಾಡಿ ತೆಗದುಕೊಂಡಿದ್ದ ಕೆಟಿಎಂ ಬೈಕ್ ಅನ್ನು ಅದೇ ರಾತ್ರಿ ಕಳ್ಳರು ಕದ್ದೊಯ್ದ ಘಟನೆ ನಡೆದಿದೆ.
ಹೊಸ ಬೈಕ್ ಕಳೆದುಕೊಂಡ ಚಂದು ಕಂಗಾಲಾಗಿದ್ದಾರೆ. ಯುವಕ ಚಂದು ಬಹುದಿನಗಳ ನಂತರ ತನ್ನ ಕನಸಿನ ಬೈಕ್ ತೆಗೆದುಕೊಂಡಿದ್ದರು. ರಾತ್ರಿ ಮಲಗಿದ್ದ ವೇಳೆ ಬೈಕ್ ಕದ್ದು ಕಳ್ಳರ ಗ್ಯಾಂಗ್ ಪರಾರಿಯಾಗಿದೆ. ಮನೆಯ ಮುಂದೆ ಲಾಕ್ ಮಾಡಿ ನಿಲ್ಲಿಸಿದ್ದ ಬೈಕ್ ಅನ್ನು ಬೈಕಿನಲ್ಲಿ ಬಂದು ಕ್ಷಣಾರ್ಧದಲ್ಲಿ ಕಳ್ಳರು ಕದ್ದೊಯ್ದಿದ್ದಾರೆ. ಕಳ್ಳರು ಬೈಕ್ ಕದ್ದು ಎಸ್ಕೇಪ್ ಆಗುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಳ್ಳತನದಿಂದ ಬೈಕ್ ಸವಾರ ಚಂದು ಕಂಗಾಲಾಗಿದ್ದಾರೆ. ಘಟನೆ ಸಂಬಂಧ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರಿಂದ ತನಿಖೆ ಮುಂದುವರಿದಿದೆ.



