ಗದಗ;- ಸಚಿವ ಕೃಷ್ಣ ಬೈರೇಗೌಡ ಅವರು ಮಹತ್ವದ ಮಾಹಿತಿ ನೀಡಿದ್ದು ಬರ ಪರಿಹಾರಕ್ಕೆ ಜಮೀನಿನ ಮಾಹಿತಿ ಒದಗಿಸಬೇಕು ಎಂದು ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಬರ ಪರಿಹಾರ ಪಡೆಯಲು ರೈತರು ತಮ್ಮ ಜಮೀನಿಗೆ ಸಂಬಂಧಪಟ್ಟ ಸಂಪೂರ್ಣ ಮಾಹಿತಿಯನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ದಾಖಲಿಸಬೇಕು. ರೈತರು ತಮ್ಮ ಹೆಸರು, ಬ್ಯಾಂಕ್ ಖಾತೆ ವಿವರಗಳನ್ನು ಈಗಾಗಲೇ ದಾಖಲು ಮಾಡಿದ್ದಾರೆ.
ಆದರೆ, ಒಬ್ಬ ರೈತನ ಬಳಿ ಎಷ್ಟು ಎಕರೆ ಜಮೀನು ಇದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಸರ್ಕಾರ ಬರ ಪರಿಹಾರ ಪಾವತಿಸುವಾಗ ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ಎರಡು ಎಕರೆ ನಮೂದಿಸಿದ್ದರೆ ಪರಿಹಾರ ಅಷ್ಟಕ್ಕೆ ಮಾತ್ರ ಸಿಗಲಿದೆ.
ಒಬ್ಬ ರೈತನಿಗೆ ಐದು ಎಕರೆ ಜಮೀನು ಇದ್ದು, ಸಂಪೂರ್ಣ ಮಾಹಿತಿಯನ್ನು ತಂತ್ರಾಂಶದಲ್ಲಿ ಅಳವಡಿಸಿದ್ದರೆ ಐದು ಎಕರೆಗೂ ಪರಿಹಾರ ಸಿಗಲಿದೆ. ಆದಕಾರಣ, ಎಲ್ಲ ರೈತರು ಕೃಷಿ ಇಲಾಖೆಗೆ ತೆರಳಿ ತಮ್ಮ ಜಮೀನಿನ ಮಾಹಿತಿಯನ್ನು ನವೆಂಬರ್ ಅಂತ್ಯದ ಒಳಗೆ ನಮೂದಿಸಬೇಕು’ ಎಂದು ತಿಳಿಸಿದರು.