ಶಿಶುಕೇಂದ್ರಿತ ಶಿಕ್ಷಣ ನಮ್ಮ ಆದ್ಯತೆಯಾಗಲಿ

0
education
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಶಿಕ್ಷಕರು ಬದಲಾಗುತ್ತಿರುವ ಸಾಮಾಜಿಕ ಅಗತ್ಯತೆ ಹಾಗೂ ಇಲಾಖೆಯ ಮಾನದಂಡಗಳಂತೆ ಶಿಶುಕೇಂದ್ರಿತ ಶಿಕ್ಷಣ ನಮ್ಮ ಆದ್ಯತೆಯಾಗಬೇಕು. ಮುಖ್ಯ ಶಿಕ್ಷಕರ ಬಲವರ್ಧನೆಗೆ ನಿಯಮಿತವಾಗಿ ಇಂತಹ ಕಾರ್ಯಾಗಾರಗಳ ಅಗತ್ಯತೆ ಇದೆ. ಈ ಪ್ರಯತ್ನಕ್ಕೆ ಕಾರಣರಾದ ಸರ್ವರನ್ನು ಅಭಿನಂದಿಸುತ್ತೇನೆ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಂ.ಎ ರಡ್ಡೇರ ತಿಳಿಸಿದರು.

Advertisement

ಅವರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾ ಘಟಕ ಹಾಗೂ ರೋಟರಿ ಕ್ಲಬ್ ಗದಗ ಬೆಟಗೇರಿ ಸಹಯೋಗದೊಂದಿಗೆ ಗದಗ ಜಿಲ್ಲಾ ಶಿಕ್ಷಣಾಧಿಕಾರಿಗಳಿಗಾಗಿ ರೋಟರಿ ಹಾಲ್‌ನಲ್ಲಿ ನಡೆದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಆರ್.ಎಸ್. ಬುರಡಿ, ಶಿಕ್ಷಣಾಧಿಕಾರಿಗಳ ಸಂಘವು ನಿಯಮಿತವಾಗಿ ಇಂತಹ ಕಾರ್ಯಾಗಾರ ಸಂಘಟಿಸಿ ಶಿಕ್ಷಣಾಧಿಕಾರಿಗಳ ಕಾರ್ಯವನ್ನು ಬೆಂಬಲಿಸುವ ಉದ್ದೇಶ ಹೊಂದಿದೆ ಎಂದರು.

ಜಿಲ್ಲಾ ಸಕಾಲ ಸಮಾಲೋಚಕರಾದ ಇಂಚಲ ಸಕಾಲ ಸೇವೆಗಳ ಅನುಷ್ಠಾನಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಸಂಘಟನಾ ಕಾರ್ಯದರ್ಶಿ ಎಚ್.ಬಿ ರಡ್ಡೇರ ಶಿಕ್ಷಣಾಧಿಕಾರಿಗಳ ಸಂಘಟನೆ ಕುರಿತು ಮಾತನಾಡಿದರು.

ಗದಗ ಗ್ರಾಮೀಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ವಿ. ನಡುವಿನಮನಿ ಸ್ವಾಗತಿಸಿದರು. ಶಿವಕುಮಾರ ಕುರಿ ನಿರೂಪಿಸಿದರು. ಶಂಕರ ಹಡಗಲಿ ವಂದಿಸಿದರು. ಎಂ.ಎಚ್. ಕಂಬಳಿ, ಮಂಗಳಾ ತಾಪಸ್ಕರ, ಎಸ್.ಡಿ. ಕನವಳ್ಳಿ, ಎಚ್.ಎಂ. ಪಡ್ನೇಶಿ, ತಾಲೂಕು ಘಟಕಗಳ ಅದ್ಯಕ್ಷರಾದ ಪಿ.ಸಿ. ಕಲಹಾಳ, ಎಂ.ಬಿ. ಹೊಸಮನಿ, ಎಸ್.ಆರ್. ನಧಾಪ್, ಗಂಗಾಧರ ಅಣ್ಣಿಗೇರಿ, ಮಜ್ಜಗಿ, ಬಿರಾದಾರ, ಕವಿತಾ ದಂಡಿನ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಘಟಕದ ಪದಾಧಿಕಾರಿಗಳು ಹಾಜರಿದ್ದರು.

ರೋಟರಿ ಸಂಸ್ಥೆಯ ಚಂದ್ರಮೌಳಿ ಜಾಲಿ, ಶ್ರೀಧರ ಸುಲ್ತಾನಪುರ ಮಾತನಾಡಿ, ಗದಗ-ಬೆಟಗೇರಿ ರೋಟರಿ ಸಂಸ್ಥೆಯು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸದಾ ವಿವಿಧ ರೀತಿಯ ಬೆಂಬಲ ನೀಡುತ್ತಾ ಬಂದಿದೆ. ಈ ವರ್ಷ ಆರ್.ಎಸ್. ಬುರಡಿಯವರ ನೇತೃತ್ವದಲ್ಲಿ `ಎಸ್‌ಎಸ್‌ಎಲ್‌ಸಿ ನಂತರ ಮುಂದೇನು’ ಎಂಬ ಕಾರ್ಯಕ್ರಮದ ಮೂಲಕ ವೃತ್ತಿಪರ ಮಾರ್ಗದರ್ಶನ ಮತ್ತು ವಿದ್ಯಾರ್ಥಿಗಳನ್ನು ಪ್ರೇರಣೆ, ಸಂಕಲ್ಪ, ಸಂಜೀವಿನಿ ಎಂದು ವಿಂಗಡಿಸಿ ಅವರ ಪ್ರಗತಿಯನ್ನಾಧರಿಸಿ ವರ್ಗಗಳನ್ನು ನಡೆಸಿ, ಹಲವು ಪ್ರಯತ್ನಗಳನ್ನು ಮಾಡಲಾಗಿದೆ ಎಂದರು.


Spread the love

LEAVE A REPLY

Please enter your comment!
Please enter your name here