HomeEducationವಿದ್ಯೆಗೆ ವಿನಯವೇ ಭೂಷಣ

ವಿದ್ಯೆಗೆ ವಿನಯವೇ ಭೂಷಣ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ನಿಮ್ಮ ಬದುಕಿಗೆ ದಾರಿದೀಪವಾದ ತಂದೆ-ತಾಯಿ, ವಿದ್ಯಾಭ್ಯಾಸ ಕಲಿಸಿದ ಗುರುಗಳು ಮತ್ತು ಕಲಿತ ಶಾಲೆಯನ್ನೆಂದಿಗೂ ನೀವು ಮರೆಯಬೇಡಿ. ಈ ಮೂರನ್ನೂ ಮರೆತರೆ ನಿಮಗೆ ನೀವೇ ದ್ರೋಹ ಮಾಡಿಕೊಂಡಂತೆ ಎಂದು ಸಾಹಿತಿ, ನಿವೃತ್ತ ಮುಖ್ಯ ಶಿಕ್ಷಕ ಅರುಣ ಬಿ.ಕುಲಕರ್ಣಿ ಹೇಳಿದರು.

ಇಲ್ಲಿಯ ಜನತಾ ವಿದ್ಯಾವರ್ದಕ ಸಂಸ್ಥೆಯ ಬಾ.ಹೊ. ಪಾಟೀಲ ಪ್ರೌಢಶಾಲೆಯಲ್ಲಿ ಏರ್ಪಡಿಸಲಾಗಿದ್ದ ಮಹಾಸರಸ್ವತಿ ಪೂಜೆ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ವಿದ್ಯೆಗೆ ವಿನಯವೇ ಭೂಷಣ. ವಿನಯಕ್ಕೆ ಸಂಸ್ಕಾರವೇ ಭೂಷಣ. ನೀವು ಒಂದಕ್ಷರವನ್ನು ಕಡಿಮೆ ಕಲಿತರೂ ಚಿಂತೆಯಿಲ್ಲ, ಸಂಸ್ಕಾರವಂತರಾಗಿ ಈ ಸಮಾಜದ ಆಸ್ತಿಯಾಗಬೇಕು ಎಂದರು.

ಸಂಸ್ಥೆಯ ನಿರ್ದೇಶಕ ವೀರಯ್ಯ ಗಂಧದ ಮಾತನಾಡಿ, ವಿದ್ಯಾರ್ಥಿಗಳು ಶಿಸ್ತು, ಸಮಯ ಪಾಲನೆಯ ಕಡೆಗೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಯಾವುದೇ ಕಾರಣಕ್ಕೂ ನಕಲಿಗೆ ಅಕಲು ಮಾಡಬೇಡಿ. ಇಂದು ನೀವು ಪೂಜಿಸಿದ ಮಹಾಸರಸ್ವತಿ ಎಲ್ಲ ಭಾಗ್ಯವನ್ನೂ ನಿಮಗೆ ನೀಡಲಿ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ಐ.ಎನ್. ಕುಂಬಾರ, ಶಿಕ್ಷಕ ಬಿ.ಎಸ್. ಕಣವಿ ಮಾತನಾಡಿದರು. ಮಾತನಾಡಿದರು. ವೇದಿಕೆಯ ಮೇಲೆ ಸಂಸ್ಥೆಯ ನಿರ್ದೇಶಕರಾದ ಟಿ.ಎನ್. ಅಂಬಕ್ಕಿ, ಕೆ.ಎಂ. ಪಾಟೀಲ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕ ಎ.ಎನ್. ಪೂಜಾರ ಸ್ವಾಗತಿಸಿದರು. ಗೌರವ ಶಿಕ್ಷಕ ದಾದಾಪೀರ ಕಿತ್ತೂರ ನಿರೂಪಿಸಿದರು. ಪಿ.ಎಸ್. ಕೊರಡೂರ ವಂದಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img