ವಿಜಯಸಾಕ್ಷಿ ಸುದ್ದಿ, ಮಂಜೇಶ್ವರ : ಎಸ್‌ಎಸ್‌ಎಫ್ ದೈಗೋಳಿ ಸೆಕ್ಟರ್ ಆಯೋಜಿಸಿದ್ದ ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ಯುವ ಬರಹಗಾರ, ಖಿದ್ಮಾ ಫೌಂಡೇಶನ್ ಕರ್ನಾಟಕ ಸಂಚಾಲಕ ಆಮಿರ್ ಅಶ್‌ಅರೀ ಬನ್ನೂರು ಉದ್ಘಾಟಿಸಿದರು.
Advertisement
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಲಿಕೆಯ ಜೊತೆಗೆ ಸಂಘಟನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಾಗ ಸಾಮಾಜಿಕ ಶ್ರದ್ಧೆ ಮತ್ತು ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ.
ಎಸ್‌ಎಸ್‌ಎಫ್ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡು ಬಂದಿರುವ ವಿವಿಧ ಯೋಜನೆಗಳ ಪೈಕಿ ಒಂದಾಗಿರುವ ಸಾಹಿತ್ಯೋತ್ಸವವು ವಿದ್ಯಾರ್ಥಿ ಮತ್ತು ಯುವಕರ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಸಬಲೀಕರಣದ ಉದ್ದೇಶ ಹೊಂದಿದೆ ಎಂದರು.
ಮುಸ್ತಫ ಸುಳ್ಯಮೆ ಅಧ್ಯಕ್ಷತೆ ವಹಿಸಿದರು. ಸ್ವಾದಿಖ್ ಅಹ್ಸನಿ ಸ್ವಾಗತಿಸಿದರು ಎಂದು ಪ್ರಧಾನ ಕಾರ್ಯದರ್ಶಿ ಮಜೀದ್ ಫಾಳಿಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.