ವಿಜಯಸಾಕ್ಷಿ ಸುದ್ದಿ, ಕೊಪ್ಪಳ
ಯೋಜನಾ ನಿರಾಶ್ರಿತರ ಪ್ರಮಾಣ ಪತ್ರ ಕೊಡಲು ಲಂಚ ಪಡೆಯುತ್ತಿದ್ದ ಶಿರಸ್ತೆದಾರರೊಬ್ಬರು ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಕೊಪ್ಪಳ ತಹಸೀಲ್ದಾರ ಕಚೇರಿಯಲ್ಲಿ ಶಿರಸ್ತೆದಾರ ಆಗಿ ಕಾರ್ಯನಿರ್ವಹಿಸುತ್ತಿದ್ದ ಸುನೀಲ್‌ಕುಮಾರ್ ಕುಲಕರ್ಣಿ ಎಂಬುವರೇ ಲೋಕಾಯುಕ್ತರ ಬಲೆಗೆ ಬಿದ್ದವರು.
ಕರಿಯಪ್ಪ ಕೊಳ್ಳಿ ಎಂಬುವವರು ತಮ್ಮ ಪುತ್ರನಿಗೆ ಯೋಜನಾ ನಿರಾಶ್ರಿತರ ಪ್ರಮಾಣ ಪತ್ರ ಬೇಕಾಗಿತ್ತು. ಅದಕ್ಕಾಗಿ ಶಿರಸ್ತೆದಾರ ಕುಲಕರ್ಣಿ ಅವರಿಗೆ ಸಂಪರ್ಕಿಸಿದಾಗ 50 ಲಂಚ ಕೇಳಿದ್ದರು ಎನ್ನಲಾಗಿದೆ.
ಆಗ ಕರಿಯಪ್ಪ ಕೊಳ್ಳಿ ಲೋಕಾಯುಕ್ತರ ಮೊರೆ ಹೋಗಿದ್ದರು. ಇಂದು ಮುಂಗಡವಾಗಿ 37ಸಾವಿರ ಹಣ ನೀಡುತ್ತಿದ್ದಾಗ ಲೋಕಾಯುಕ್ತರು ದಾಳಿ ಮಾಡಿ, ಲಂಚದ ಹಣ ಹಾಗೂ ಸುನೀಲ್ ಕುಮಾರ್ ಅವರನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್‌ಗಳಾದ ಶೈಲಾ ಪ್ಯಾಟಿಶೆಟ್ರ, ಚಂದ್ರಪ್ಪ ಈಟಿ, ರಾಜೇಶ್ ಬಟಗುರ್ಕಿ, ಸುನೀಲ್ ಹಾಗೂ ವಿಜಯಕುಮಾರ್ ಸೇರಿದಂತೆ ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.