ಅಧಿಕಾರಿಗಳಿಂದ ಡೆಂಗ್ಯೂ ಪ್ರಕರಣಗಳ ಪರಿಶೀಲನೆ

0
Verification of dengue cases by authorities
Spread the love

ವಿಜಯಸಾಕ್ಷಿ ಸುದ್ದಿ, ಧಾರವಾಡ : ಧಾರವಾಡ ತಾಲೂಕಿನ ಮುಮ್ಮಿಗಟ್ಟಿ ಗ್ರಾಮದಲ್ಲಿ ಡೆಂಗ್ಯೂ ಶಂಕಿತ ಬಾಲಕಿ ಸಾವು ಪ್ರಕರಣ ಹಾಗೂ ಡೆಂಗ್ಯೂ ಶಂಕಿತ 7 ಪ್ರಕರಣಗಳ ಪತ್ತೆಯಿಂದಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರ ನಿರ್ದೇಶನದ ಮೇರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಮತ್ತು ಉಪವಿಭಾಗಾಧಿಕಾರಿ ಶಾಲಂ ಹುಸೇನ ಮುಮ್ಮಿಗಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ಡಿಎಚ್‌ಓ ಡಾ. ಶಶಿ ಪಾಟೀಲ ಹಾಗೂ ತಾಲೂಕು ವೈದ್ಯಾಧಿಕಾರಿ ಡಾ. ಕೆ.ಎನ್. ತನುಜಾ ಅವರ ನೇತೃತ್ವದ ಆಶಾ ಕಾರ್ಯಕರ್ತೆಯರ ತಂಡ ಗ್ರಾಮದಲ್ಲಿ ಹೆಚ್ಚು ಜ್ವರ ಪೀಡಿತರ ಓಣಿಗಳಿಗೆ ಭೇಟಿ ನೀಡಿ, ಮನೆಯಲ್ಲಿನ ಕುಟುಂಬದವರ ಅಭಿಪ್ರಾಯ ಸಂಗ್ರಹಿಸಿತು.

ಈ ಸಂದರ್ಭದಲ್ಲಿ ಮುಮ್ಮಿಗಟ್ಟಿ ಗ್ರಾ.ಪಂ ಅಧ್ಯಕ್ಷೆ ಸುವರ್ಣಾ ಕೊಟ್ರಿ, ಉಪಾಧ್ಯಕ್ಷ ವಿಠ್ಠಲ ಬಟ್ಟಂಗಿ, ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಪರಶುರಾಮ ಕವಲೂರ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here