HomeEntertainment‘ಸಿನಿಮಾಗೆ ಗುಡ್‌ಬೈ’ ಎಂದಿದ್ದ ನಟನಿಗೆ ಲೋಕೇಶ್ ಕಾಲ್: ಒಂದೇ ಕ್ಷಣದಲ್ಲಿ ಬದಲಾದ ಜಯಂ ರವಿ ನಿರ್ಧಾರ!

‘ಸಿನಿಮಾಗೆ ಗುಡ್‌ಬೈ’ ಎಂದಿದ್ದ ನಟನಿಗೆ ಲೋಕೇಶ್ ಕಾಲ್: ಒಂದೇ ಕ್ಷಣದಲ್ಲಿ ಬದಲಾದ ಜಯಂ ರವಿ ನಿರ್ಧಾರ!

For Dai;y Updates Join Our whatsapp Group

Spread the love

ಚೆನ್ನೈ: ವಿಚ್ಛೇದನ ಪ್ರಕರಣ ಮತ್ತು ವೈಯಕ್ತಿಕ ವಿವಾದಗಳಿಂದ ಸುದ್ದಿಯಲ್ಲಿದ್ದ ನಟ ಜಯಂ ರವಿ, ಚಿತ್ರರಂಗದಿಂದ ತಾತ್ಕಾಲಿಕವಾಗಿ ದೂರ ಉಳಿಯುವುದಾಗಿ ಘೋಷಿಸಿದ್ದರೂ ಇದೀಗ ಭರ್ಜರಿ ಕಮ್‌ಬ್ಯಾಕ್‌ಗೆ ಸಜ್ಜಾಗಿದ್ದಾರೆ. ತಮಿಳು ಚಿತ್ರರಂಗದ ಸ್ಟಾರ್ ನಿರ್ದೇಶಕ ಲೋಕೇಶ್ ಕನಕರಾಜ್ ಅವರ ಸಿನಿಮ್ಯಾಟಿಕ್ ಯೂನಿವರ್ಸ್‌ಗೆ ಸೇರ್ಪಡೆಯಾಗುವ ಮೂಲಕ ಅವರು ಹೊಸ ಅಧ್ಯಾಯ ಆರಂಭಿಸಿದ್ದಾರೆ.

ಲೋಕೇಶ್ ಕನಕರಾಜ್ ಬೆಂಬಲದಲ್ಲಿ ನಿರ್ಮಾಣವಾಗುತ್ತಿರುವ ‘ಬೆಂಜ್’ ಸಿನಿಮಾದ ಪ್ರಮುಖ ಪಾತ್ರಕ್ಕೆ ಜಯಂ ರವಿ ಆಯ್ಕೆಯಾಗಿದ್ದು, ಈ ಕುರಿತು ಅಧಿಕೃತ ಘೋಷಣೆ ಹೊರಬಿದ್ದಿದೆ. “ವೆಲ್ಕಮ್ ಟು ದಿ ಯೂನಿವರ್ಸ್” ಎಂದು ಲೋಕೇಶ್ ಹಂಚಿಕೊಂಡಿರುವ ಪೋಸ್ಟ್ ಇದೀಗ ವೈರಲ್ ಆಗಿದೆ.

ಕೆಲ ದಿನಗಳ ಹಿಂದಷ್ಟೇ ತಮ್ಮ ವೈಯಕ್ತಿಕ ಜೀವನದ ಒತ್ತಡದಿಂದ ಸಿನಿಮಾಗಳಿಂದ ದೂರ ಉಳಿಯುವುದಾಗಿ ಜಯಂ ರವಿ ಘೋಷಿಸಿದ್ದರು. ವಿಚ್ಛೇದನ ಪ್ರಕ್ರಿಯೆ ಮುಗಿಯುವವರೆಗೂ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುವುದಿಲ್ಲ, ಈಗಿನ ಪರಿಸ್ಥಿತಿಯಲ್ಲಿ ನಟನೆಯತ್ತ ಗಮನಹರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದರು.

ಸೈಬರ್ ಬುಲ್ಲಿಂಗ್, ವೈಯಕ್ತಿಕ ಆರೋಪಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ನಿಂದನೆಗಳು ತಮ್ಮ ಮೇಲೆ ಪರಿಣಾಮ ಬೀರಿವೆ ಎಂದು ರವಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಅಗತ್ಯವಿದ್ದರೆ ನಿರ್ಮಾಪಕರ ಹಣವನ್ನೂ ಹಿಂದಿರುಗಿಸಿ ವಿರಾಮ ಪಡೆಯುವುದಾಗಿ ತಿಳಿಸಿದ್ದರು.

ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ತಮಿಳು ಚಿತ್ರರಂಗದ ಅತ್ಯಂತ ಯಶಸ್ವಿ ಫ್ರಾಂಚೈಸಿಯಾಗಿರುವ ಲೋಕೇಶ್ ಸಿನಿಮ್ಯಾಟಿಕ್ ಯೂನಿವರ್ಸ್‌ನಲ್ಲಿ ಅವಕಾಶ ಸಿಕ್ಕಿರುವುದು ಜಯಂ ರವಿ ಅವರ ವೃತ್ತಿಜೀವನಕ್ಕೆ ಹೊಸ ತಿರುವು ನೀಡಿದೆ.

ಇದರ ಜೊತೆಗೆ ಗಾಯಕಿ ಕೆನಿಶಾ ಫ್ರಾನ್ಸಿಸ್ ಅವರೊಂದಿಗಿನ ಸಂಬಂಧದ ಕುರಿತ ಚರ್ಚೆಗಳೂ ಮುಂದುವರಿದಿವೆ. ಆದರೆ ವೈಯಕ್ತಿಕ ವಿವಾದಗಳ ನಡುವೆಯೇ ವೃತ್ತಿಜೀವನಕ್ಕೆ ಆದ್ಯತೆ ನೀಡಿರುವ ಜಯಂ ರವಿ, ಇದೀಗ ಮತ್ತೆ ಬಿಗ್ ಸ್ಕ್ರೀನ್‌ನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!