Homecultureಅಯೋಧ್ಯೆಗೆ ತೆರಳಿದ ವಿ.ಹಿಂ.ಪರಿಷತ್ತಿನ ಶ್ರೀರಾಮಭಕ್ತ ಕಾರ್ಯಕರ್ತರ ಪಡೆ

ಅಯೋಧ್ಯೆಗೆ ತೆರಳಿದ ವಿ.ಹಿಂ.ಪರಿಷತ್ತಿನ ಶ್ರೀರಾಮಭಕ್ತ ಕಾರ್ಯಕರ್ತರ ಪಡೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ಭಗವಾನ್ ಶ್ರೀರಾಮನ ಜನ್ಮಸ್ಥಳವಾದ ಅಯೋಧ್ಯೆಯು ಹಿಂದೂ ಸಂಪ್ರದಾಯದಲ್ಲಿ ಆಳವಾದ ಪ್ರಾಮುಖ್ಯತೆಯನ್ನು ಹೊಂದಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಮಠ-ಮಂದಿರಗಳ ಪ್ರಾಂತ ಪ್ರಮುಖರಾದ ಬಸವರಾಜ ಹೇಳಿದರು.

ಅವರು ಶನಿವಾರ ಗದುಗಿನ ರೇಲ್ವೇ ನಿಲ್ದಾಣದಲ್ಲಿ ಗದಗ ಜಿಲ್ಲಾ ವಿಶ್ವ ಹಿಂದೂ ಪರಿಷತ್ತಿನಿಂದ ಏರ್ಪಡಿಸಿದ್ದ ಅಯೋಧ್ಯೆ ತೆರಳುವ ವಿ.ಹಿಂ.ಪರಿಷತ್ತಿನ ೨೬೦ಕ್ಕೂ ಹೆಚ್ಚು ಶ್ರೀರಾಮಭಕ್ತ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಅಯೋಧ್ಯೆಯು ಭಗವಾನ್ ರಾಮನ ದೈವಿಕ ವಾಸಸ್ಥಾನವಾಗಿದೆ. ಇದು ಹಿಂದೂಗಳಿಗೆ ಆಳವಾದ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಶೃದ್ಧಾಕೇಂದ್ರವಾಗಿದೆ ಎಂದು ಬಣ್ಣಿಸಿದರಲ್ಲದೆ ವ್ಹಿ.ಎಚ್.ಪಿ ಕಾರ್ಯಕರ್ತರು ಭಗವಾನ್ ಶ್ರೀರಾಮನ ದರ್ಶನ ಪಡೆದು, ಸುಖಕರ ಪ್ರಯಾಣ ಪೂರೈಸಲಿ ಶುಭ ಹಾರೈಸಿದರು.

ರೇಲ್ವೆ ಇಲಾಖೆಯ ಅಧಿಕಾರಿ ಡಾ.ಕವಿರಾಜ ಮಾತನಾಡಿ, ಬೆಳಗಾವಿಯಿಂದ ಹೊರಡುವ ಈ ವಿಶೇಷ ಆಸ್ಥಾ ರೇಲ್ವೆ ಅಯೋಧ್ಯಾ ಧಾಮವನ್ನು ನೇರವಾಗಿ ತಲುಪಲಿದೆ. ಪ್ರಯಾಣಿಕರು ರೇಲ್ವೆಯಲ್ಲಿ ಪ್ರಯಾಣಿಸುವಾಗ ಪರಸ್ಪರ ಸಹಕಾರ, ಸೌಹಾರ್ದತೆಯಿಂದ ವರ್ತಿಸಬೇಕು. ಇಲಾಖೆಯು ಅಗತ್ಯ ಸೌಲಭ್ಯಗಳನ್ನು ಒದಗಿಸಲಿದ್ದು, ಪ್ರಯಾಣಿಕರು ಸ್ವಚ್ಛತೆಯನ್ನು ಕಾಯ್ದುಕೊಳ್ಳಬೇಕೆಂದರು.

ವೇದಿಕೆಯ ಮೇಲೆ ರೇಲ್ವೆ ಇಲಾಖೆಯ ಇನ್ನೋರ್ವ ಅಧಿಕಾರಿ ದೇವಯಾನಿ, ವ್ಹಿ.ಎಚ್.ಪಿ ಪ್ರಾಂತ ಮಹಿಳಾ ಪ್ರಮುಖರಾದ ಮಾಯಾ ಚೌದರಿ, ಸೇವಾ ಪ್ರಮುಖ ಶಿವು ಮೆಲನಾಡ, ವ್ಹಿ.ಎಚ್.ಪಿ ವಿಜಯಪುರ ಜಿಲ್ಲಾಧ್ಯಕ್ಷ ಸಿದ್ದು ಹೂಗಾರ, ಬಾಗಲಕೋಟಿ ಅಧ್ಯಕ್ಷ ಗಂಗಾಧರ ಮುರನಾಳ, ಗದಗ ಜಿಲ್ಲಾ ಅಧ್ಯಕ್ಷ ಶ್ರೀಧರ ಕುಲಕರ್ಣಿ, ಉಪಾಧ್ಯಕ್ಷ ವೀರಣ್ಣ ಹೇಮಾದ್ರಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಹಬೀಬ ಉಪಸ್ಥಿತರಿದ್ದರು.

ಗಣೇಶ ಲದವಾ, ಪ್ರಶಾಂತ ಚವಡಿ, ಸಚಿನ್ ಮಡಿವಾಳರ, ಮಾರ್ಕಂಡೇಯ ಕಂತ್ರೋಜಿ, ಮಂಜುನಾಥ ದಹಿಂಡೆ ಅವರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು. ವಿಶ್ವ ಹಿಂದೂ ಪರಿಷತ್ತು ಪ್ರಯಾಣಿಕರಿಗೆ ವ್ಯವಸ್ಥೆಯನ್ನು ಕಲ್ಪಿಸಿದ್ದು ಪ್ರವೀಣ ಬನ್ಸಾಲಿ ಸೇರಿದಂತೆ ಇತರ ದಾನಿಗಳು ಈ ಪ್ರಯಾಣಿಕರಿಗೆ ಉಪಹಾರ, ತಿಂಡಿ-ತಿನಿಸು, ನೀರಿನ ಬಾಟಲ್ ವ್ಯವಸ್ಥೆ ಮಾಡಿದರು ಎಂದು ಗದಗ ಜಿಲ್ಲಾ ವಿ.ಹಿಂ.ಪ ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಹಬೀಬ ತಿಳಿಸಿದ್ದಾರೆ.

ಫೆ. ೧೭ರಂದು ಮಧ್ಯಾಹ್ನ ೩ ಗಂಟೆಗೆ ಗದಗ ರೇಲ್ವೆ ನಿಲ್ದಾಣದಿಂದ ಹೊರಟ ಈ ವಿಶೇಷ ರೈಲು ಫೆ. ೧೯ರಂದು ರಾತ್ರಿ ಅಯೋಧ್ಯೆ ತಲುಪಲಿದೆ. ೨,೩೦೦ ರೂ. ಪ್ರಯಾಣ ಶುಲ್ಕವಿದ್ದು ಗದಗ ಜಿಲ್ಲೆಯಿಂದ ೩೦, ಬಿಜಾಪೂರ ಜಿಲ್ಲೆಯಿಂದ ೧೧೧, ಜಮಖಂಡಿಯಿAದ ೪೨, ಬಾಗಲಕೋಟಿಯಿಂದ ೮೨ ಸೇರಿದಂತೆ ಒಟ್ಟು ೨೬೫ ಪ್ರಯಾಣಿಕರು ಪ್ರಯಾಣ ಆರಂಭಿಸಿದರು. ಇವರಲ್ಲಿ ಸುಮಾರು ೩೫ ಮಹಿಳಾ ಪ್ರಯಾಣಿಕರಿದ್ದು, ಫೆ. ೨೦ರ ರಾತ್ರಿ ಅಯೋಧ್ಯಾದಿಂದ ಈ ರೇಲ್ವೆ ಮರಳಲಿದೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!