ವಿಜಯಸಾಕ್ಷಿ ಸುದ್ದಿ, ಲಕ್ಕುಂಡಿ : ಸಮೀಪದ ಹರ್ಲಾಪೂರ ಕೊಟ್ಟೂರೆಶ್ವರ ಮಠದಲ್ಲಿ 302ನೇ ಶಿವಾನುಭ ಕಾರ್ಯಕ್ರಮದಲ್ಲಿ ಮಹರ್ಷಿ ವಾಲ್ಮೀಕಿ ಹಾಗೂ ರಾಣಿ ಕಿತ್ತೂರ ಚನ್ನಮ್ಮ ಜಯಂತಿಯನ್ನು ಆಚರಿಸಲಾಯಿತು.
ಸಾನ್ನಿಧ್ಯ ವಹಿಸಿದ್ದ ಡಾ. ಕೊಟ್ಟೂರೇಶ್ವರ ಸ್ವಾಮೀಜಿ ವಾಲ್ಮೀಕಿ ಹಾಗೂ ರಾಣಿ ಕಿತ್ತೂರ ಚನ್ನಮ್ಮಳ ಜಯಂತಿಗೆ ಶುಭಾಶಯ ಕೋರಿ, ಇವರ ತತ್ವ, ಜೀವನ ಚರಿತ್ರೆಯ ನೀತಿಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಟಿ.ಉದಯಕುಮಾರ ಹಾಗೂ ಖೋಖೋ ಪಂದ್ಯಾವಳಿಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಕೆ.ಬಿ. ವೀರಾಪೂರ, ನಾಗೇಂದ್ರ ಅರ್ಕಸಾಲಿ ಅವರು ಸಂಗೀತ ಸೇವೆ ನೀಡಿದರು. ಡಾ. ಎಸ್.ಸಿ. ಸರ್ವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೋಮಣ್ಣ ಬಾಲಬಸವರ, ಶೇಖಪ್ಪ ಪೂಜಾರ, ಶಿವಾನಂದ ಪಟ್ಟೇದ, ಅಡಿವೆಪ್ಪ ಗೌಡಪ್ಪನವರ ಉಪಸ್ಥಿತರಿದ್ದರು. ರಾಮಣ್ಣ ಬೆಳಧಡಿ ಸ್ವಾಗತಿಸಿದರು. ವೆಂಕಟೇಶ ಜುಂಜಣಿ ನಿರೂಪಿಸಿದರು.