HomeEducationಇತಿಹಾಸ ರಚಿಸಿ ಸಾಧಕರಾಗಿ

ಇತಿಹಾಸ ರಚಿಸಿ ಸಾಧಕರಾಗಿ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಡಾ. ಅಂಬೇಡ್ಕರರು ಹೇಳುವ ಹಾಗೆ ಇತಿಹಾಸ ತಿಳಿದವರು ಮಾತ್ರ ಇತಿಹಾಸ ರಚಿಸುತ್ತಾರೆ. ಆದ್ದರಿಂದ ಮಕ್ಕಳು ಇತಿಹಾಸ ತಿಳಿದು ಸಾಧಕರಾಗಿ ಇತಿಹಾಸ ರಚಿಸುವಂತಾಗಬೇಕು ಎಂದು ಗದಗ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಎಸ್. ಬುರಡಿ ಹೇಳಿದರು.

ಅವರು ವಿದ್ಯಾವರ್ಧಕ ಸಂಸ್ಥೆಯ ಸಿ.ಎಸ್. ಪಾಟೀಲ ಸಮೂಹ ಶಾಲೆಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪಾಲಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪಾಲಕರು ಮಕ್ಕಳಿಗೆ ಒಳ್ಳೆಯ ಸಂಸ್ಕಾರ ನೀಡಬೇಕು. ಮಕ್ಕಳಲ್ಲಿ ಆದರ್ಶ ಗುಣಗಳನ್ನು ಬಿತ್ತಬೇಕು. ಅಂದಾಗ ನಮ್ಮ ನಾಡು ಸರ್ವಜನಾಂಗದ ಶಾಂತಿಯ ತೋಟವಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವ ಕಾರ್ಯದರ್ಶಿ ವೀರನಗೌಡ ಪಾಟೀಲ ವಹಿಸಿದ್ದರು.

ಸಂಸ್ಥೆಯ ಉಪಾಧ್ಯಕ್ಷ ಲಿಂಗರಾಜ ಪಾಟೀಲ, ನಿಂಗನಗೌಡ ಹಿರೇಮನಿಪಾಟೀಲ, ರಾಜೀವಗಾಂಧಿ ಪೊಲೀಸ್ ಠಾಣೆಯ ಪಿ.ಎಸ್.ಐ. ವಿಜಯಕುಮಾರ ತಳವಾರ, ಆಡಳಿತ ಮಂಡಳಿಯ ಸದಸ್ಯೆ ಗೀತಾಬಾಯಿ ಪಾಟೀಲ ಮಾತನಾಡಿದರು. ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಆರ್.ಎಲ್. ಹಂಸನೂರರವರು ಸಂವಿಧಾನ ಪೂರ್ವ ಪೀಠಿಕೆ ಬೋಧಿಸಿದರು. ಬಾಲಕಿಯರ ಪ್ರೌಢಶಾಲಾ ಮುಖ್ಯಾಧ್ಯಾಪಕ ಎಸ್.ಜಿ. ಕೋಲ್ಮಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಮ್.ಆರ್. ನಾಯಿಕ ಶಾಲೆಯ ವರದಿ ವಾಚಿಸಿದರು.

ಎನ್.ವಿ. ಪಾಟೀಲ ಸ್ವಾಗತಿಸಿದರು. ವಸ್ತುಪ್ರದರ್ಶನವನ್ನು ಆಯ್.ಎಸ್. ಗೌಡರ, ವಾಯ್.ವಾಯ್. ಉಣಕಲ್ ಹಾಗೂ ಆರ್.ಕೆ. ಜಮಖಂಡಿ ನಿರ್ವಹಿಸಿದರು. ವೇದಿಕೆ ಕಾರ್ಯಕ್ರಮವನ್ನು ಜಿ.ಎಸ್. ಪಾಟೀಲ ನಿರೂಪಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ಎಸ್.ಎಮ್. ತಳವಾರ, ಕೆಂಗುಡ್ಡಪ್ಪನವರ, ಎಚ್.ಪಿ. ಹಿರೇಮಠ, ಎಸ್.ಎಸ್. ಗುಜಮಾಗಡಿ ನಡೆಸಿಕೊಟ್ಟರು.

ನಿವೃತ್ತ ಮುಖ್ಯಾಧ್ಯಾಪಕ ಎನ್.ವಿ. ಜೋಶಿ, ಎನ್.ಎಸ್. ಹಂಜಗಿ, ಬಿ.ಎಸ್. ಹೊನಗುಡಿ, ಎಚ್.ಪಿ. ಹಿರೇಮಠ, ವಿದ್ಯಾರ್ಥಿ ಪ್ರತಿನಿಧಿಗಳಾದ ಪ್ರೀತಮ ಹಡಪದ, ಅಶ್ವಿನಿ ಬಾರಕೇರ, ಮೇಘಾ ಕೊಪ್ಪದ, ವಿಜಯಕುಮಾರ ವೇದಿಕೆಯಲ್ಲಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img